ಅಂತರಾಷ್ಟ್ರೀಯ

ಭಾರತ–ಪಾಕ್ ಬಯಸಿದರೆ ವಿಶ್ವಸಂಸ್ಥೆ ಮಧ್ಯಸ್ಥಿಕೆ: ಮೂನ್

Pinterest LinkedIn Tumblr

banವಿಶ್ವಸಂಸ್ಥೆ(ಪಿಟಿಐ): ಭಾರತ–ಪಾಕಿಸ್ತಾನಗಳ ನಡುವಿನ ವೈಮನಸ್ಯ ನಿವಾರಣೆಗೆ ಉಭಯ ರಾಷ್ಟ್ರಗಳು ಬಯಸಿದರೆ ವಿಶ್ವಸಂಸ್ಥೆ ಮಧ್ಯಸ್ಥಿಕೆ ವಹಿಸಲಿದೆ ಎಂದು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್ ಕಿ ಮೂನ್ ಹೇಳಿದ್ದಾರೆ.
ಭಾರತದ ಜತೆ ದ್ವಿಪಕ್ಷೀಯ ಶಾಂತಿ ಮಾತುಕತೆ ಪುನರಾರಂಭ ಪ್ರಕ್ರಿಯೆಯನ್ನು ಸದ್ಯಕ್ಕೆ ‘ಅಮಾನತು’­ಗೊಳಿಸಲಾಗಿದೆ ಎಂದು ಪಾಕಿಸ್ತಾನದ ರಾಯಭಾರಿ ಅಬ್ದುಲ್‌ ಬಾಸಿತ್‌ ಅವರು ಗುರುವಾರ ಹೇಳಿದ್ದಾರೆ. ಈ ಮೂಲಕ ಭಾರತದೊಂದಿಗಿನ ಮಾತುಕತೆ ಪ್ರಕ್ರಿಯೆಗೆ ಪಾಕಿಸ್ತಾನ ಬಾಗಿಲು ಮುಚ್ಚಿದೆ. ಈ ಬೆಳವಣಿಗೆಯ ಬಳಿಕ ಮೂನ್ ಅವರು ಈ ಹೇಳಿಕೆ ನೀಡಿದ್ದಾರೆ.
ಉಭಯ ರಾಷ್ಟ್ರಗಳ ನಡುವೆ ಸಂಘರ್ಷದಿಂದ ಸಮಸ್ಯೆ ಎದುರಾಗಿದೆ. ಸಮಸ್ಯೆ ನಿವಾರಣೆಗೆ ಉತ್ತಮ ವೇದಿಕೆ ಒದಗಿಸುವ ನಿಟ್ಟಿನಲ್ಲಿ ಮಧ್ಯಸ್ಥಿಕೆ ಅಗತ್ಯವಿದೆ. ಈ ಕುರಿತು ಎರಡೂ ರಾಷ್ಟ್ರಗಳ ಒಪ್ಪಿಗೆ ಕೇಳಲಾಗುವುದು ಎಂದು ಬಾನ್‌ ಕಿ ಮೂನ್ ಅವರ ವಕ್ತಾರ ಸ್ಟೀಫನ್ ಡುಜರಿಕ್ ಅವರು ತಿಳಿಸಿದ್ದಾರೆ.

Write A Comment