ಅಂತರಾಷ್ಟ್ರೀಯ

ಮ್ಯಾನ್ಮಾರ್ ಅಧ್ಯಕ್ಷರ ವಕ್ತಾರೆ ಹುದ್ದೆಗೆ ಸಜ್ಜಾದ ಸೂಕಿ

Pinterest LinkedIn Tumblr

Suu-Kyiಯಾಂಗೂನ್‌ (ಎಎಫ್‌ಪಿ): ಎರಡು ಪ್ರಮುಖ ಸಚಿವಾಲಯಗಳನ್ನು ನಿರ್ವಹಿಸುವ ಯೋಚನೆ ಕೈಬಿಟ್ಟಿರುವ ಪ್ರಜಾಪ್ರಭುತ್ವ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ, ಇದೀಗ ಅಧ್ಯಕ್ಷರ ವಕ್ತಾರೆ ಪಾತ್ರವನ್ನು ನಿರ್ವಹಿಸಲಿದ್ದಾರೆ.
ದಶಕಗಳ ಕಾಲ ಹೋರಾಡಿ ಮ್ಯಾನ್ಮಾರ್‌ನಲ್ಲಿ ಸೇನಾಡಳಿತ ಕೊನೆಗೊಳಿಸಿ ಪ್ರಜಾಪ್ರಭುತ್ವ ಜಾರಿಗೊಳಿಸುವಲ್ಲಿ ಸೂಕಿ ಅವರು ಪ್ರಮುಖ ಪಾತ್ರವಹಿಸಿದ್ದರು. ಕಳೆದ ವರ್ಷ ನಡೆದ ಚುನಾವಣೆಯಲ್ಲಿ ಅವರ ಪಕ್ಷ ಬಹುಮತ ಪಡೆದಿತ್ತು.
ಆದರೆ, ಸೇನಾ ಸಂರಚಿತ ಸಂವಿಧಾನದಿಂದಾಗಿ ಅಧ್ಯಕ್ಷ ಹುದ್ದೆಗೇರುವ ಅವಕಾಶದಿಂದ ವಂಚಿತರಾಗಿದ್ದ ಸೂಕಿ, ಅಧ್ಯಕ್ಷರಿಗಿಂತಲೂ ‘ಉನ್ನತ’ ಪಾತ್ರವನ್ನು ನಿರ್ವಹಿಸುವ ಸುಳಿವು ನೀಡಿದ್ದರು.
ಕಳೆದ ವಾರವಷ್ಟೇ ಸೇನೆಯಿಂದ ಅಧಿಕಾರ ಹಸ್ತಾಂತರಗೊಂಡು ದೇಶದಲ್ಲಿ ಪ್ರಜಾಪ್ರಭುತ್ವ ಜಾರಿಗೆ ಬಂದಿತ್ತು. ಈ ವೇಳೆ, ಸೂಕಿ ಅವರು ವಿದೇಶಾಂಗ, ಇಂಧನ, ಶಿಕ್ಷಣ ಹಾಗೂ ಅಧ್ಯಕ್ಷರ ಕಚೇರಿಯಲ್ಲಿ ಸಚಿವ ಸ್ಥಾನವನ್ನು ನಿರ್ವಹಿಸಲಿದ್ದಾರೆ ಎಂದು ಅವರ ನ್ಯಾಷನಲ್ ಲೀಗ್‌ ಫಾರ್‌ ಡೆಮೊಕ್ರಸಿ ಪಕ್ಷ ಹೇಳಿತ್ತು.
ಆದರೆ, ಸೋಮವಾರ ನಡೆದ ಸಂಸತ್ತಿನ ಅಧಿವೇಶನದಲ್ಲಿ ಇಂಧನ ಹಾಗೂ ಶಿಕ್ಷಣ ಸಚಿವ ಸ್ಥಾನಗಳಿಗೆ ಎರಡು ಹೊಸ ಹೆಸರುಗಳನ್ನು ಎನ್‌ಎಲ್‌ಡಿ ಸೂಚಿಸಿದೆ ಎಂದು ಪಕ್ಷದ ವಕ್ತಾರರಾದ ವಿನ್ ಹಟಿನ್ ತಿಳಿಸಿದ್ದಾರೆ.
ಅಲ್ಲದೇ, ‘ಆಂಗ್ ಸಾನ್‌ ಸೂಕಿ ಅವರು ಅಧ್ಯಕ್ಷರ ವಕ್ತಾರೆಯಾಗಿ ಕಾರ್ಯನಿರ್ವಹಿಸಲಿದೆ’ ಎಂದು ವಿನ್ ಅವರು ಸ್ಪಷ್ಟಪಡಿಸಿದ್ದಾರೆ.

Write A Comment