ಅಂತರಾಷ್ಟ್ರೀಯ

ಬಂದಿದೆ ಪಲ್ಟಿಯಾಗದ ಕಾರಿನಂತಹ ಬೈಕು; ಎಂದಿಗೂ ಉರುಳಿ ಹೋಗದು!

Pinterest LinkedIn Tumblr

motorbike-car-1ಕಾರಿನ ಮಾದರಿ ವಿನ್ಯಾಸ ಹೊಂದಿದ ಬೈಕ್‌. ಆದರೆ ಏನೇ ಮಾಡಿದರೂ, ಯಾವುದೇ ವಾಹನ ಬಂದು ಡಿಕ್ಕಿ ಹೊಡೆದರೂ,
ತಿರುವಿನಲ್ಲೂ ಅಪ್ಪಿತಪ್ಪಿಯೂ ಇದು ಪಲ್ಟಿಯಾಗದು. ಅರೆ ಇದೇನಿದು? ಎಂಬ ಪ್ರಶ್ನೆಗೆ ಉತ್ತರ ಕೊಡುವ ರೀತಿಯಲ್ಲಿ ಈ ಬೈಕ್‌ ಆವಿಷ್ಕಾರವಾಗಿದೆ. ಅಮೆರಿಕ ಸ್ಯಾನ್‌ಫ್ರಾನ್ಸಿಸ್ಕೋ ಮೂಲದ ಲಿಟ್‌ ಮೋಟಾರ್ ಎಂಬ ಕಂಪನಿ ಇದರ ಸೃಷ್ಟಿಕರ್ತ. “ಸಿ1′ ಹೆಸರಲ್ಲಿ ಈ ಬೈಕು ಆವಿಷ್ಕಾರವಾಗಿದ್ದು ಕಾರಿನ ಮಾದರಿ ವಿನ್ಯಾಸವನ್ನು ಹೊಂದಿದೆ.

ಮುಂದಿನ ಜಮಾನಾದ ಬೈಕ್‌ ಇದು ಎಂದು ಕಂಪನಿ ಹೇಳಿಕೊಂಡಿದೆ. ಇದು ಸಂಪೂರ್ಣ ಎಲೆಕ್ಟ್ರಿಕ್‌ ಬೈಕ್‌. ಒಂದು ಬಾರಿ ಚಾರ್ಜ್‌ ಮಾಡಿದರೆ ಸುಮಾರು 320 ಕಿ.ಮೀ. ದೂರ ಸಂಚರಿಸುವ ಸಾಮರ್ಥ್ಯ ಹೊಂದಿದೆ. ಓರ್ವ ಸವಾರ ಕೂರಬಹುದಾದ ಮತ್ತು ಸಾಕಷ್ಟು ಸರಕು ಇಡಲೂ ಇದರಲ್ಲಿ ಸ್ಥಳಾವಕಾಶ ಇದೆ. ಅಲ್ಲದೇ ಗಂಟೆಗೆ ಗರಿಷ್ಠ 100 ಕಿ.ಮೀ. ವೇಗದಲ್ಲಿ ಸಂಚರಿಸಬಲ್ಲದು. 0 ಯಿಂದ 60 ರ ವೇಗಕ್ಕೆ ಕೇವಲ 6 ಸೆಕೆಂಡ್‌ ತೆಗೆದುಕೊಳ್ಳುತ್ತದೆ. ಅಷ್ಟು ಶಕ್ತಿಯುತವಾದ ಮೋಟರ್‌ ಅನ್ನು ಇದು ಹೊಂದಿದೆ.

ಇದಕ್ಕೂ ಮಿಕ್ಕಿದ ವಿಶೇಷ ಎಂದರೆ ತಾನೇ ಬ್ಯಾಲೆನ್ಸ್‌ ಮಾಡಿಕೊಳ್ಳುತ್ತದೆ. ಇದಕ್ಕಾಗಿ “ಬ್ಯಾಲೆನ್ಸ್‌ ಡೈನಾಮಿಕ್ಸ್‌’ ತಂತ್ರಜ್ಞಾನವನ್ನು ಇದರಲ್ಲಿ ಅಳವಡಿಸಲಾಗಿದೆ. ಇದರಿಂದಾಗಿ ಅಪಘಾತದ ಸಂದರ್ಭ, ಯಾವುದೇ ವಾಹನ ಡಿಕ್ಕಿ ಹೊಡೆದ ಸಂದರ್ಭಗಳಲ್ಲಿ ಬೈಕು ಉರುಳಿ ಬೀಳುವ, ಸವಾರರ ಎಸೆದಂತಾಗುವ ಪ್ರಮೇಯವಿಲ್ಲ. ಆದರೂ ಬೈಕ್‌ ನಿಲುಗಡೆ ವೇಳೆ ಪುಟ್ಟ ಸ್ಟಾಂಡ್‌ಗಳು ಇದರಲ್ಲಿದ್ದು ಸ್ವಯಂಚಾಲಿತವಾಗಿ ನೆರವಿಗೆ ಬರುತ್ತವೆ. ಬೈಕ್‌ ನಿಯಂತ್ರಣಕ್ಕೆ ಇದರಲ್ಲಿ ಕಾರಿನಂತೆ ಸ್ಟೀರಿಂಗ್‌ ಇದ್ದು ಸ್ಮಾರ್ಟ್‌ ಕಂಟ್ರೋಲ್‌ ವ್ಯವಸ್ಥೆ, ಕಾರಿನಂತೆ ಏರ್‌ಕಂಡೀಷನರ್‌ ಇತ್ಯಾದಿ ವ್ಯವಸ್ಥೆಯನ್ನು ಹೊಂದಿದೆ. ಬೈಕ್‌ ನಿಲ್ಲಿಸಲೂ ಹೆಚ್ಚು ಸಮಸ್ಯೆಯಿಲ್ಲ. ಸೂಪರ್‌ ಬೈಕ್‌ಗಳಷ್ಟು
ಇದು ದೊಡ್ಡದಾಗಿದ್ದು ಪಾರ್ಕಿಂಗ್‌ ಹೆಚ್ಚು ಕಷ್ಟವಿಲ್ಲ. ಇದೀಗ ಸಿ1 ಉತ್ಪಾದನಾ ಹಂತದಲ್ಲಿದ್ದು ಶೀಘ್ರ ಬಿಡುಗಡೆಯಾಗಲಿದೆ.
ಅಮೆರಿಕದಲ್ಲಿ ಇದರ ಬೆಲೆ ಸುಮಾರು 15 ಲಕ್ಷ ರೂ. ಎಂದು ಹೇಳಲಾಗಿದೆ. ಭಾರತದ ಮಾರುಕಟ್ಟೆಗೂ ಇದು ಲಗ್ಗೆ ಇಡುವ ದಿನಗಳು ದೂರವಿಲ್ಲ.
-ಉದಯವಾಣಿ

Write A Comment