ಅಂತರಾಷ್ಟ್ರೀಯ

ಪಾಕ್‌: 59 ಭಾರತೀಯ ಮೀನುಗಾರರ ಬಂಧನ

Pinterest LinkedIn Tumblr

fishermenwebಕರಾಚಿ (ಪಿಟಿಐ): ಅಂತರರಾಷ್ಟ್ರೀಯ ಜಲಗಡಿ ಉಲ್ಲಂಘಿಸಿದ ಆರೋಪದಡಿ ಭಾರತದ 59 ಮೀನುಗಾರರನ್ನು ಪಾಕಿಸ್ತಾನದ ಕರಾವಳಿ ಭದ್ರತಾ ಪಡೆ (ಎಂಎಸ್‌ಎ) ಬಂಧಿಸಿದೆ.
ಸಿಂಧ್‌ ಮತ್ತು ಗುಜರಾತ್‌ ಕರಾವಳಿ ತೀರದಲ್ಲಿ ಬರುವ ವಿವಾದಿತ ‘ಸರ್‌ ಕ್ರೀಕ್‌’ನಲ್ಲಿ ಮೀನು ಹಿಡಿಯುತ್ತಿದ್ದಾಗ ಇವರನ್ನು ಬಂಧಿಸಲಾಗಿದೆ. ಭಾರತೀಯ ಮೀನುಗಾರರಿಗೆ ಸೇರಿದ 10 ದೋಣಿಗಳನ್ನೂ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಮೂಲಗಳು ಹೇಳಿವೆ.
ಬಂಧಿತ ಮೀನುಗಾರರ ವಿರುದ್ಧ ವಿದೇಶಿಗರ ಕಾಯ್ದೆ ಸೆಕ್ಷನ್‌ 3 ಮತ್ತು 4ರ ಅಡಿ ಮತ್ತು ಮೀನುಗಾರಿಕೆ ಕಾಯ್ದೆ 3 ಮತ್ತು 9ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಎಕ್ಸ್‌ಪ್ರಸ್‌ ಟ್ರಿಬ್ಯೂನ್‌ ವರದಿ ಮಾಡಿದೆ.
ಕಳೆದ ತಿಂಗಳಷ್ಟೇ ಪಾಕಿಸ್ತಾನ ಸರ್ಕಾರ ಎರಡು ತಂಡಗಳಲ್ಲಿ ಒಟ್ಟು 86 ಮೀನುಗಾರರನ್ನು ಬಿಡುಗಡೆ ಮಾಡಿತ್ತು.

Write A Comment