ಅಂತರಾಷ್ಟ್ರೀಯ

‘ಗರ್ಭಪಾತ ಮಾಡಿಸಿಕೊಳ್ಳುವ ಮಹಿಳೆಯರಿಗೆ ಶಿಕ್ಷೆಯಾಗಬೇಕು

Pinterest LinkedIn Tumblr

trump-e1458218305799ಬ್ರೂಕ್ಫೀಲ್ಡ್: ಗರ್ಭಪಾತ ಮಾಡಿಸಿಕೊಳ್ಳುವ ಮಹಿಳೆಯರಿಗೆ ಕೆಲ ವಿಧದ ಶಿಕ್ಷೆಯಾಗಬೇಕು ಎಂದು ಅಮೆರಿಕ ಅಧ್ಯಕ್ಷಿಯ ಚುನಾವಣೆ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಮಹಿಳೆಯರು ಪದೇ ಪದೇ ಗರ್ಭಪಾತಕ್ಕೆ ಮಾಡಿಸಿಕೊಂಡು ಭ್ರೂಣ ಹತ್ಯೆಗೆ ಕಾರಣರಾಗುತ್ತಿದ್ದಾರೆ. ಆದ್ದರಿಂದ, ಗರ್ಭಪಾತಕ್ಕೆ ಒಳಗಾಗುವವರಿಗೆ ಕೆಲ ಮಟ್ಟಿನ ಶಿಕ್ಷೆಯಾಗಬೇಕು ಎಂದು ಅವರು ಹೇಳಿದ್ದಾರೆ.

ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿ ಹಿಲೆರಿ ಕ್ಲಿಂಟನ್, ಟ್ವಿಟ್ಟರ್‌ನಲ್ಲಿ ಟ್ವೀಟ್ ಮಾಡಿ ಡೊನಾಲ್ಡ್ ಟ್ರಂಪ್ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ನೀವು ಹೇಳಿದ ಮಾತ್ರಕ್ಕೆ ಶಿಕ್ಷೆ ನೀಡಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದಾರೆ.

ಇನ್ನು ಹಿಲರಿ ಟ್ವೀಟ್ ಗೆ ಪ್ರತಿಕ್ರಿಯಿಸಿರುವ ಟ್ರಂಪ್ ಜೀವನದಲ್ಲಿ ಮೂರು ಆಂಶಗಳಿಗೆ ವಿನಾಯಿತಿ ನೀಡಬೇಕು. ಆದರೆ ಆ ವಿನಾಯಿತಗಳು ಯಾವುವು ಎಂಬುದನ್ನು ಬಹಿರಂಗಗೊಳಿಸಲಾಗುವುದಿಲ್ಲ ಎಂದು ಹೇಳಿದ್ದಾರೆ.

Write A Comment