ಅಂತರಾಷ್ಟ್ರೀಯ

“ರಾ” ಅಧಿಕಾರಿ ಬಲೂಚಿಸ್ಥಾನದಲ್ಲಿ ಬಂಧನ

Pinterest LinkedIn Tumblr

raw-and-nia-logosಲಾಹೋರ್: ಪಾಕ್-ಅಪಘಾನಿಸ್ತಾನದ ಗಡಿಭಾಗದಲ್ಲಿ ಭಾರತದ ಗೂಢಚರ ಇಲಾಖೆ(ರಾ)ಯ ಅಧಿಕಾರಿಯೊಬ್ಬರನ್ನು ಬಲೂಚಿಸ್ಥಾನದಲ್ಲಿ ಬಂಧಿಸಲಾಗಿದೆ ಎಂದು ಬಲೂಚಿಸ್ತಾನದ ಗೃಹ ಸಚಿವ ಮಿರ್ ಸರ್ಫರಾಜ್ ಭುಗ್ತಿ ಹೇಳಿದ್ದಾರೆ.

ಸೆರೆ ಸಿಕ್ಕ ಅಧಿಕಾರಿಯ ವಿಚಾರಣೆಯ ವೇಳೆ ಆತ ಅಪಘಾನಿಸ್ತಾನದ ಗುಪ್ತಚರ ಇಲಾಖೆಯೊಂದಿಗೆ ಕೆಲಸ ಮಾಡುತ್ತಿದ್ದು ಇವರನ್ನು ಬೊಷಣ್ ಯಾದವ್ ಎನ್ನಲಾಗಿದೆ.

ಮಾಹಿತಿಗಳ ಪ್ರಕಾರ ಮೊದಲು ಯಾದವ್ ಭಾರತೀಯ ನೌಕಾಪಡೆಯಲ್ಲಿ ಕೆಲಸ ಮಾಡುತ್ತಿದ್ದು ನಂತರ ಗುಪ್ತಚರ ಇಲಾಖೆಗೆ ಆಯ್ಕೆ ಮಾಡಿ ಬಲೂಚಿಸ್ತಾನಕ್ಕೆ ಕಳುಹಿಸಲಾಗಿತ್ತು ಎನ್ನಲಾಗಿದೆ.

ಸೆರೆಸಿಕ್ಕ ಯಾದವ್ ಗೆ ಬಲೂಚಿಸ್ತಾನದಲ್ಲಿರುವ ಪ್ರತ್ಯೇಕಾವಾದಿ ಉಗ್ರಗಾಮಿಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸುವ ವಿಚಾರವಾಗಿ ರಾ ನೇಮಕ ಮಾಡಿಕೊಂಡಿತ್ತು, ಈ ಹಿನ್ನಲೆಯಲ್ಲಿ ಗುರುವಾರದಂದು ಪಾಕಿಸ್ತಾನದ ಐಎಸ್ಐ ಮಾಹಿತಿ ನೀಡಿತ್ತು ಎಂದು ಬುಗ್ತಿ ಹೇಳಿದ್ದಾರೆ.

ಇವರ ಜೊತೆಯಲ್ಲಿ ಇನ್ನೂ ಹಲವು ಮಂದಿ ಪಾಕ್ ಅಪಘಾನಿಸ್ತಾನ ಗಡಿಯಲ್ಲಿ ಭಾರತದ ರಾ ಇಲಾಖೆಯವರು ಇರುವ ಬಗ್ಗೆ ಮಾಹಿತಿಯಿದೆ, ಹಾಗೂ ಯಾದವ್ ಅವರ ನಿಜನಾಮದ ಕುರಿತೂ ಇನ್ನೂ ಸ್ಪಷ್ಟವಾಗಿ ತಿಳಿದು ಬಂದಿಲ್ಲ. ಈ ಕಾರಣದಿಂದ ನಾವು ಯಾವುದೇ ನಿಖರವಾದ ಮಾಹಿತಿ ಒದಗಿಸಲು ಸಾಧ್ಯವಿಲ್ಲ ಎಂದಿದ್ದಾರೆ.

Write A Comment