ಅಂತರಾಷ್ಟ್ರೀಯ

ಭಾರತೀಯ ರಾಯಭಾರಿ ಕಚೇರಿ ಮೇಲೆ ಬಾಂಬ್ ಸ್ಫೋಟ

Pinterest LinkedIn Tumblr

afghanistan-attack-e1456910255160ಜಲಲಾಬಾದ್: ಇಲ್ಲಿನ ಭಾರತೀಯ ರಾಯಭಾರಿ ಕಚೇರಿ ಮೇಲೆ ಅವಳಿ ಸ್ಫೋಟ ಸಂಭವಿಸಿದ ಘಟನೆ ಇಂದು ನಡೆದಿದೆ.

ರಾಯಭಾರಿ ಕಚೇರಿ ಮೇಲೆ ಬಾಂಬ್ ಸ್ಫೋಟದ ಜೊತೆ ಗುಂಡಿನ ದಾಳಿ ನಡೆದಿದೆ ಎನ್ನಲಾಗಿದೆ. ಘಟನೆಯಿಂದಾಗಿ ಎಲ್ಲಾ ಭಾರತೀಯರು ಅಪಾಯದಿಂದ ಪಾರಾಗಿದ್ದು, ಮಗು ಸಹಿತ 19 ಮಂದಿಗೆ ಗಾಯಗಳಾಗಿವೆ ಎಂಬುವುದಾಗಿ ವರದಿಯಾಗಿದೆ.

ಕಚೇರಿಗೆ ಭದ್ರತೆ ಒದಗಿಸುವ ಭಾರತದ ಇಂಡೋ-ಟೆಬೆಟನ್ ಗಡಿ ಪೊಲೀಸ್ ಹಾಗೂ ಆಫ್ಘನ್ ಭದ್ರತಾ ಪಡೆಗಳು ಜೊತೆಗೂ ಉಗ್ರರ ವಿರುದ್ಧ ಪ್ರತಿದಾಳಿ ನಡೆಸಿ ಎಲ್ಲರನ್ನೂ ಸಂಹರಿಸಿದ್ದಾರೆ. ಐವರು ದಾಳಿಕೋರರಲ್ಲಿ ಓರ್ವ ಆತ್ಮಹತ್ಯಾ ಬಾಂಬ್ ಕೂಡ ಒಳಗೊಂಡಿದ್ದಾನೆ ಎನ್ನಲಾಗಿದೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್, ಇದು ಭಾರತೀಯ ರಾಯಭಾರ ಕಚೇರಿಯನ್ನು ಗುರಿಯಾಗಿಸಿಕೊಂಡು ಮಾಡಲಾಗಿದ್ದ ದಾಳಿಯಾದರೂ ಕಚೇರಿಯ ಸಿಬ್ಬಂದಿಗೆ ಯಾವುದೇ ಅಪಾಯವಾಗಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಾಂಬ್ ಸ್ಫೋಟಕ್ಕೆ ತನ್ನ ಅಂಗಡಿಯ ಕಿಟಕಿ ಗಾಜುಗಳು ಪುಡಿಪುಡಿಯಾಯಿತು. ಹಲವು ಜನರು ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದರು ಎಂದು ಘಟನೆ ನಡೆದಾಗ ಸ್ಥಳದಲ್ಲಿದ್ದ ಅಂಗಡಿ ವ್ಯಾಪಾರಿಯೊಬ್ಬ ಹೇಳಿದ್ದಾನೆ.

ಇದೇ ವೇಳೆ, ಈ ದಾಳಿಯ ಹೊಣೆಯನ್ನು ಸದ್ಯಕ್ಕೆ ಯಾವ ಸಂಘಟನೆಯೂ ಹೊತ್ತುಕೊಂಡಿಲ್ಲ. ಕಳೆದ ವರ್ಷ ಜನವರಿಯಲ್ಲಿ, ಉತ್ತರ ಅಫಘಾನ್ ಭಾರತೀಯ ದೂತಾವಾಸದ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ್ದರು.

Write A Comment