ಅಂತರಾಷ್ಟ್ರೀಯ

ರಷ್ಯಾ ಕಲ್ಲಿದ್ದಲು ಗಣಿ ದುರಂತ, 36 ಸಾವು

Pinterest LinkedIn Tumblr

russia_webಮಾಸ್ಕೋ: ಉತ್ತರ ರಷ್ಯಾದ ಸೆವರ್ನಯಾದಲ್ಲಿರುವ ಕಲ್ಲಿದ್ದಲು ಗಣಿಯಲ್ಲಿ ಸ್ಫೋಟ ಸಂಭವಿಸಿ ಒಟ್ಟು 36 ಜನರು ಮೃತಪಟ್ಟಿದ್ದಾರೆ.

748 ಮೀಟರ್ ಆಳದಲ್ಲಿ ಕಲ್ಲಿದ್ದಲು ಗಣಿಗಾರಿಕೆ ನಡೆಸುತ್ತಿದ್ದಾಗ, ಗುರುವಾರ ಒಳಗಡೆ ಮೀಥೇನ್ ಅನಿಲ ಸ್ಫೋಟ ಸಂಭವಿಸಿತ್ತು. ಇದರಿಂದಾಗಿ 5 ಕಾರ್ಮಿಕರು ಗಣಿಯ ಒಳಭಾಗದಲ್ಲಿ ಸಿಲುಕಿ ಮೃತಪಟ್ಟಿದ್ದರು ಮತ್ತು 26 ಜನರು ಕಾಣಿಯಾಗಿದ್ದರು. ಕಾಣಿಯಾಗಿರುವವರಿಗಾಗಿ ರಕ್ಷಣಾ ಕಾರ್ಯಾಚರಣೆ ನಡೆಸಲಾಗುತ್ತಿತ್ತು. ಭಾನುವಾರ ಮತ್ತೆ ಮೀಥೇನ್ ಅನಿಲ ಸ್ಫೋಟ ಸಂಭವಿಸಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದ ಐವರು ಮೃತಪಟ್ಟಿದ್ದಾರೆ ಮತ್ತು 11 ಜನರು ಗಾಯಗೊಂಡಿದ್ದಾರೆ.

77 ಜನರನ್ನು ಸುರಕ್ಷಿರವಾಗಿ ರಕ್ಷಿಸಲಾಗಿದೆ. ಗಣಿಯ ಒಳಗೆ ಸಿಲುಕಿರುವವರು ಬದುಕಿರುವ ಸಾಧ್ಯತೆ ಕಡಿಮೆ ಇರುವುದರಿಂದ ಅವರು ಮೃತಪಟ್ಟಿದ್ದರೆ ಎಂದು ತಜ್ಞರು ತಿಳಿಸಿದ್ದಾರೆ.

ಗಣಿ ಪ್ರದೇಶದಲ್ಲಿ ಹೊಸ ಸ್ಪೋಟಗಳು ಸಂಭವಿಸುವ ಸಾಧ್ಯತೆ ಇರುವುದರಿಂದ ರಕ್ಷಣಾ ಕಾರ್ಯಾಚರಣೆ ನಿಲ್ಲಿಸಲಾಗಿದೆ ಎಂದು ಸ್ಥಳೀಯ ಆಡಳಿತ ತಿಳಿಸಿದೆ.

Write A Comment