ಅಂತರಾಷ್ಟ್ರೀಯ

ಸಿಡ್ನಿ ರಸ್ತೆಗೆ ಬಂಟ್ವಾಳದ ಪ್ರಭಾ ಹೆಸರು: ದುಷ್ಕರ್ಮಿಯಿಂದ ಹತ್ಯೆಯಾದ ಕನ್ನಡತಿಗೆ ಅಸ್ಟ್ರೇಲಿಯದ ಗೌರವ

Pinterest LinkedIn Tumblr

Prabha2ಮೆಲ್ಬೋರ್ನ್, ನ.23: ಈ ವರ್ಷದ ಮಾರ್ಚ್ 7ರಂದು ಸಿಡ್ನಿಯಲ್ಲಿ ಹತ್ಯೆಗೀಡಾಗಿದ್ದ ಬಂಟ್ವಾಳ ಮೂಲದ ಟೆಕ್ಕಿ ಪ್ರಭಾ ಅರುಣ ಕುಮಾರ್ ಅವರಿಗೆ ಗೌರವ ಸಲ್ಲಿಸಿರುವ ಆಸ್ಟ್ರೇಲಿಯಾ ಸರಕಾರವು ಪ್ರಭಾ ಹತ್ಯೆ ನಡೆದ ರಸ್ತೆಗೆ ಅವರ ಹೆಸರನ್ನೇ ನಾಮಕರಣ ಮಾಡಿದೆ.

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ಮೂಲದವ ರಾದ ಪ್ರಭಾ ಅವರ ಹತ್ಯೆಗೆ ಕಾರಣವಿನ್ನೂ ತಿಳಿದು ಬಂದಿಲ್ಲ. ಸಿಡ್ನಿಯಲ್ಲಿ ಸಾಫ್ಟ್‌ವೇರ್ ಎಂಜಿನಿ ಯರ್ ಆಗಿದ್ದ ಪ್ರಭಾ ಅರುಣ್ ಅವರು ತನ್ನ ಅಪಾರ್ಟ್‌ಮೆಂಟ್ ಸಮೀಪವೇ ಇರುವ ಪರಮಟ್ಟಾ ಪಾರ್ಕ್ ಸಮೀಪ ಮಾರ್ಚ್ 7 ರಂದು ದುಷ್ಕರ್ಮಿಯೊಬ್ಬನ ಇರಿತಕ್ಕೆ ಬಲಿಯಾಗಿ ದ್ದರು. ಹತ್ಯೆಗೆ ಮುನ್ನ ಪ್ರಭಾ ಕಾಲುದಾರಿ ಯಲ್ಲಿ ನಡೆದುಕೊಂಡು ಹೋಗುತ್ತಿದ್ದ ದೃಶ್ಯ ಸಿಸಿಟಿವಿ ಯಲ್ಲಿ ದಾಖಲಾಗಿತ್ತು. ಪ್ರಭಾ ಅವರ ಹಂತಕನ ಬಗ್ಗೆ ಈವರೆಗೆ ಸುಳಿವು ಲಭಿಸಿಲ್ಲ.

ತನ್ನ ನಿವಾಸಕ್ಕೆ ತೆರಳುತ್ತಿದ್ದಾಗ ಪ್ರಭಾ ಪಾರ್ಕ್ ವೊಂದರಲ್ಲಿ ಹಂತಕನಿಗೆ ಬಲಿಯಾಗಿದ್ದು, ಅವರು ಕೊನೆಯ ಹೆಜ್ಜೆಗಳನ್ನು ಹಾಕಿದ್ದ ಕಾಲುದಾರಿಗೆ ‘ಪ್ರಭಾಸ್ ವಾಕ್’ಎಂದು ನಾಮಕರಣ ಮಾಡಲಾಗಿದೆ. ಪ್ರಭಾರ ಹೆಸರಿನಲ್ಲಿ ಬೆಂಚೊಂದನ್ನು ಸಹ ಅನಾವರಣಗೊಳಿಸಲಾಗಿದ್ದು, ಶ್ರದ್ಧಾಂಜಲಿ ಕಾರ್ಯಕ್ರಮದ ವೇಳೆ ಅದರ ಮೇಲೆ ಪುಷ್ಪಗುಚ್ಛಗಳನ್ನಿರಿಸಲಾಗಿತ್ತು.

Write A Comment