ಅಂತರಾಷ್ಟ್ರೀಯ

ಪ್ಯಾರಿಸ್ ದಾಳಿಯ ಮಾಸ್ಟರ್ ಮೈಂಡ್ ಅಬೌಡ್ ಹತ್ಯೆ

Pinterest LinkedIn Tumblr

Abdelhamid-Abaaoudಪ್ಯಾರಿಸ್: ಫ್ರಾನ್ಸ್ ರಾಜಧಾನಿ ಪ್ಯಾರಿಸ್ ನಲ್ಲಿ ಇಸಿಸ್ ಉಗ್ರರು ನಡೆಸಿದ ದಾಳಿಯ ಮಾಸ್ಟರ್ ಮೈಂಡ್ ಬೆಲ್ಜಿಯಂನ ಅಬ್ಡೆಲ್ ಹಮೀದ್ ಅಬೌಡ್ ಪೊಲೀಸರ ಗುಂಡಿನ ದಾಳಿಗೆ ಬಲಿಯಾಗಿದ್ದಾನೆ ಎಂದು

ಪ್ಯಾರಿಸ್ ನಲ್ಲಿ ಸರಣಿ ಬಾಂಬ್ ದಾಳಿಯಿಂದಾಗಿ 129 ಮಂದಿ ಸಾವಿಗೆ ಕಾರಣನಾಗಿದ್ದ ಅಬೌಡ್ ವಿರುದ್ಧ ಪ್ಯಾರಿಸ್ ಪೊಲೀಸರು ನಡೆಸಿದ ಕಾರ್ಯಾಚರಣೆ ವೇಳೆ ಅಬೌಡ್ ಸೇರಿ ಇಬ್ಬರು ಉಗ್ರರು ಮೃತಪಟ್ಟಿದ್ದಾರೆ ಎಂದು ಫ್ರೆಂಚ್ ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.

ಪ್ಯಾರಿಸ್ ನಲ್ಲಿ ರಕ್ತಪಾತ ನಡೆಸಿದ್ದ 28 ವರ್ಷದ ಅಬೌಡ್ ದಮನಕ್ಕೆ ಪ್ಯಾರಿಸ್ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ನಿನ್ನೆ ಅಪಾರ್ಟ್ ಮೆಂಟ್ ವೊಂದರ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಅಬೌಡ್ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

Write A Comment