ಅಂತರಾಷ್ಟ್ರೀಯ

ಪ್ಯಾರೀಸ್‏ನಲ್ಲಿ ಉಗ್ರರ ಅಟ್ಟಹಾಸ: ದಾಳಿ ಮಾಡಿದ ಎಲ್ಲಾ 15 ಉಗ್ರರ ಹತ್ಯೆ

Pinterest LinkedIn Tumblr

22parisಪ್ಯಾರೀಸ್: ಫ್ರಾನ್ಸ್ ರಾಜಧಾನಿ ಪ್ಯಾರೀಸ್ ಮೇಲೆ ಉಗ್ರರ ಅಟ್ಟಹಾಸ ಪ್ರಕರಣಕ್ಕೆ ಸಂಬಂಧಿಸಿದಂತೆ ಭದ್ರತಾ ಸಿಬ್ಬಂದಿಗಳು ದಾಳಿ ನಡೆಸಿದ ಎಲ್ಲಾ 15 ಉಗ್ರರನ್ನು ಶನಿವಾರ ಹತ್ಯೆ ಮಾಡಿರುವುದಾಗಿ ತಿಳಿದುಬಂದಿದೆ.

ನಿನ್ನೆ ರಾತ್ರಿಯಿಂದಲೇ ದಾಳಿ ನಡೆಸಲು ಮುಂದಾಗಿದ್ದ ಉಗ್ರರ ಗುಂಪೊಂದು ಪ್ಯಾರೀಸ್ ನ ಒಟ್ಟು 6 ಪ್ರದೇಶಗಳಲ್ಲಿ ದಾಳಿ ನಡೆಸಿತ್ತು. ದಾಳಿಯಲ್ಲಿ 150ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದರಲ್ಲದೇ, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಗಾಯಗೊಂಡ 200 ಮಂದಿಯಲ್ಲಿ 80 ಮಂದಿಯ ಸ್ಥಿತಿ ಚಿಂತಾಜನಕವಾಗಿದೆ.

ಉಗ್ರರು ತಮ್ಮ ಯೋಜನೆಯಂತೆಯೇ ಪ್ಯಾರೀಸ್ ನ ಬಟಾಕ್ಲಾನ್ ಆರ್ಟ್ ಸೆಂಟರ್ ಮೇಲೆ ದಾಳಿ ಮಾಡಿದ್ದರು. ಈ ವೇಳೆ 112 ಮಂದಿಯನ್ನು ಒತ್ತೆಯಾಳುಗಳಾಗಿರಿಸಿಕೊಂಡಿದ್ದರು. ರಕ್ಷಣಾ ಕಾರ್ಯಾಚರಣೆಗಿಳಿದಿದ್ದ ಭದ್ರತಾ ಸಿಬ್ಬಂದಿಗಳು ಒತ್ತೆಯಾಳಾಗಿರಿಸಿಕೊಂಡಿದ್ದ ಒಟ್ಟು 4 ಉಗ್ರರನ್ನು ಹತ್ಯೆ ಮಾಡಿದ್ದಾರೆ.

ಸೆಂಟ್ರಲ್ ಪ್ಯಾರೀಸ್ ನ ಲೆ ಪಿಟಿಟ್ ಕಾಂಬೋಡ್ಜ್ ರೆಸ್ಟೋರೆಂಟ್ ಮೇಲೂ ಮೂವರು ಉಗ್ರರು ದಾಳಿ ನಡೆಸಿ 14 ಮಂದಿಯನ್ನು ಹತ್ಯೆ ಮಾಡಿದ್ದರು. ಉಗ್ರರು ಅಡಗಿರುವ ತಾಣವನ್ನು ಕಂಡು ಹಿಡಿದಿದ್ದ ಭದ್ರತಾ ಸಿಬ್ಬಂದಿಗಳು ಮೂವರು ಉಗ್ರರನ್ನು ಹೊಡೆದುರುಳಿಸಿದ್ದಾರೆ. ಪ್ಯಾರೀಸ್ ಮೇಲೆ ಒಟ್ಟು 15 ಮಂದಿಯ ಉಗ್ರರ ಗುಂಪೊಂದು ದಾಳಿ ನಡೆಸಿತ್ತು ಎಂದು ಹೇಳಲಾಗುತ್ತಿತ್ತು. ಉಗ್ರರನ್ನು ಹತ್ಯೆ ಮಾಡಲು ಕಾರ್ಯಾಚರಣೆಗಿಳಿದಿದ್ದ ಭದ್ರತಾ ಸಿಬ್ಬಂದಿಗಳು ಇದೀಗ ಎಲ್ಲಾ 15 ಉಗ್ರರನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದಾರೆ.

Write A Comment