ಅಂತರಾಷ್ಟ್ರೀಯ

ಕಠಿಣ ಪರಿಶ್ರಮದ ಸೇವೆ : ಭಾರತ ಮೂಲದ ಮಹಿಳೆಗೆ ಬ್ರಿಟನ್ ಪ್ರಶಸ್ತಿ

Pinterest LinkedIn Tumblr

britanಲಂಡನ್, ನ.11-ಬ್ರಿಟನ್ನಿನ ಅನೇಕ ಜನರು ಅದರಲ್ಲೂ ಮಹಿಳೆಯರ ಬದುಕು ರೂಪಿಸುವಲ್ಲಿ ಕಠಿಣ ಪರಿಶ್ರಮದ ಸೇವೆ ಸಲ್ಲಿಸಿರುವ ಭಾರತ ಮೂಲದ 46 ವರ್ಷದ ಮಹಿಳೆ, ಸಾಮಾಜಿಕ ಕಾರ್ಯಕರ್ತೆ ಮುನಾ ಚೌಹಾಣ್ ಅವರಿಗೆ ಪಾಯಿಂಟ್ ಆಫ್ ಲೈಟ್ ಬಿರುದು ನೀಡಿ ಸನ್ಮಾನಿಸಿದೆ.

ಬ್ರಿಟನ್ ಪ್ರಧಾನಿ ಡೆವಿಡ್ ಕಮರೋನ್ ಮೂನಾ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಿದರು. ತನ್ನ ಸಂಘಟನೆ ಮೂಲಕ ಸಾಮುದಾಯಿಕ ಸಂಘಟನೆ ಸ್ಥಾಪಿಸಿ, ಅನೇಕ ಭಾರತೀಯ ಹಾಗೂ ಬ್ರಿಟನ್ ಪುರುಷರು-ಮಹಿಳೆಯರು ತಮ್ಮದೇ ಬದುಕು ರೂಪಿಸಿಕೊಳ್ಳಲು ಮುನಾ ಚೌಹಾಣ್ ಶ್ರಮಿಸಿದ್ದಾರೆ.

ಮುನಾ ಅವರಿಗೆಲ್ಲ ಆರ್ಥಿಕ ನೆರವು ನೀಡುವುದಷ್ಟೇ ಅಲ್ಲದೆ, ಬದುಕಿನ ಬಂಡಿಗೂ ನೆರವಾಗಿದ್ದಾರೆ ಎಂದು ಕಮೆರೋನ್ ಬಣ್ಣಿಸಿದ್ದಾರೆ. 200 ಕುಟುಂಬಗಳು ಈಗ ನೆಮ್ಮದಿ ಕಂಡುಕೊಳ್ಳಲು ಮೂನಾ ಅವರ ಫೆಂಟಾಸ್ಟಿಕ್ ಸಂಸ್ಥೆ ನೆರವಾಗಿದೆ.

Write A Comment