ಅಂತರಾಷ್ಟ್ರೀಯ

ಅಮೆರಿಕ-ಭಾರತ-ಜಪಾನ್ ದೇಶಗಳ ಸಭೆ : ಚೀನಾಗೆ ಶಾಕ್

Pinterest LinkedIn Tumblr

chinaವಾಷಿಂಗ್ಟನ್, ಸೆ.23-ಪರಸ್ಪರ ತ್ರಿಪಕ್ಷೀಯ ಪಾಲುದಾರಿಕೆಗೆ ಸಂಬಂಧಿಸಿದಂತೆ ಅಮೆರಿಕ, ಭಾರತ ಮತ್ತು ಜಪಾನ್ ಮಂತ್ರಿಗಳ ಮಟ್ಟದ ಮಾತುಕತೆ ನಡೆಸಲು ನಿರ್ಧರಿಸಿರುವುದು ಚೀನಾದ ಹುಬ್ಬೇರುವಂತೆ ಮಾಡಿದೆ.

ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಡೆಯಲಿರುವ ಹಿನ್ನೆಲೆಯಲ್ಲಿ ಈ ಮೂರೂ ರಾಷ್ಟ್ರಗಳ ಮುಖ್ಯಸ್ಥರು ಮುಂದಿನ ವಾರ ನ್ಯೂಯಾರ್ಕ್ ನಲ್ಲಿ ತಮ್ಮ ಮೊದಲ ಸಭೆ ನಡೆಸಲು ನಿರ್ಧರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ನಾನು ಇಬ್ಬರೂ ಜಪಾನ್ ವಿದೇಶಾಂಗ ಸಚಿವರಾದ ಕಿಷೀದಾರೊಂದಿಗೆ ಸಭೆ ನಡೆಸಿ, ಮುಂದಿನ ವಾರ ನಡೆಯುವ ವಿಶ್ವಸಂಸ್ಥೆ ಸಾಮಾನ್ಯ ಸಭೆಗೆ ಪೂರಕವಾಗಿ ತ್ರಿಪಕ್ಷೀಯ ಮಾತುಕತೆ ನಡೆಸಲಿದ್ದೇವೆ ಎಂದು ಸುಷ್ಮಾ ಸ್ವರಾಜ್ ಅವರೊಂದಿಗೆ ಇಂದಿಲ್ಲಿ ನಡೆಸಿದ ಜಂಟಿ ಸುದ್ದಿಗೋಷ್ಠಿಯಲ್ಲಿ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರ್ರಿ ಹೇಳಿದ್ದಾರೆ.

ಮೂರು ದೇಶಗಳ ವಿದೇಶಾಂಗ ಸಚಿವರ ಮೊಟ್ಟಮೊದಲ ಸಭೆಯಲ್ಲಿ ತ್ರಿಪಕ್ಷೀಯ ಮಾತುಕತೆ  ನಡೆಸಲು ಸದ್ಯದಲ್ಲೇ ನಾವು ನ್ಯೂಯಾರ್ಕ್‌ನಲ್ಲೂ ಮತ್ತೆ ಸೇರಲಿದ್ದೇವೆ  ಎಂದು ಸುಷ್ಮಾ ಸ್ವರಾಜ್ ಹೇಳಿದ್ದಾರೆ.

Write A Comment