ಅಂತರಾಷ್ಟ್ರೀಯ

ನೊಂದ ತಾಯಿಯ ಪತ್ರಕ್ಕೆ ಫೇಸ್ ಬುಕ್ ನಲ್ಲಿ ಸಖತ್ ರೆಸ್ಪಾನ್ಸ್

Pinterest LinkedIn Tumblr

fb-letತನ್ನ ಹದಿವಯಸ್ಸಿನ ಮಗನಿಗೆ ಸ್ವಾತಂತ್ರ್ಯ ಪಾಠ ಕಲಿಸಲು, ತಾಯಿಯೊಬ್ಬಳು ಬರೆದ ಪತ್ರವೊಂದು ಫೇಸ್‌ಬುಕ್‌ನಲ್ಲಿ ಅತೀವ ಹರಿದಾಡುತ್ತಿದೆ. ಇದರಿಂದಾಗಿ ತಂದೆ- ತಾಯಿಗಳ ವಿರುದ್ದ ಸಮಯ ಸಿಕ್ಕಾಗಲೆಲ್ಲಾ ತಿರುಗಿ ಬೀಳಲು ಹವಣಿಸುತ್ತಾರೆ.

ಎಸ್ಟೆಲ್ಲಾ ಹ್ಯಾವಿಶಮ್ ಎಂಬ ಮಹಿಳೆಯೊಬ್ಬಳು ಆರೋನ್‌ ಎಂಬುವವನನ್ನು ಸೂಚಿಸಿ ಬರೆದ ಪತ್ರದಲ್ಲಿ ಆತನ ವಿದ್ಯುತ್, ಬಾಡಿಗೆ, ಇಂಟರ್ನೆಟ್ ಖರ್ಚು ಹಾಗೂ ಆಹಾರದ ಖರ್ಚನ್ನು ಪಾವತಿಸಲು ಹೇಳಿದ್ದು, ‘ನಿನಗಿನ್ನೂ 13 ವರ್ಷ, ನಾನು ನಿನ್ನ ತಾಯಿ,’ ಎಂದು ಒತ್ತಿ ಹೇಳಲಾಗಿದೆ.

ದುಡಿಯುವ ಹಂತ ತಲುಪಿದರಂತೂ ತಂದೆ- ತಾಯಿಗಳನ್ನು ಕಾಲ ಕಸದಂತೆ ಕಾಣುತ್ತಾರೆ. ತನ್ನ 13 ವರ್ಷದ ಮಗನ ನಡವಳಿಕೆಯಿಂದ ನೊಂದಿದ್ದ ಅಮೆರಿಕಾದ ತಾಯಿಯೊಬ್ಬಳು ಆತನಿಗೆ ಬಹಿರಂಗ ಪತ್ರ ಬರೆದು ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ಪ್ರಕಟಿಸಿದ್ದು, ಅದನ್ನು ಈಗಾಗಲೇ 87 ಸಾವಿರ ಮಂದಿ ಲೈಕ್ ಮಾಡಿದ್ದರೆ, 162,000 ಮಂದಿ ಶೇರ್ ಮಾಡಿದ್ದಾರೆ. ಇದು ಎಲ್ಲರ ಮನೆಯ ಕಥೆಯೂ ಆಗಿರುವ ಕಾರಣ ಕಮೆಂಟ್ ಗಳ ಮಹಾಪೂರವೇ ಹರಿದು ಬರುತ್ತಿದೆ.

ತಾಯಿ ಹೇಳಿದ ಯಾವೊಂದು ಮಾತನ್ನು ಮಗ ಕೇಳುವುದಿಲ್ಲ. ಅಲ್ಲದೇ ಯೂ ಟ್ಯೂಬ್ ಮೂಲಕ ತಾನು ಹಣ ಗಳಿಸುತ್ತೇನೆಂದು ಹೇಳುತ್ತಾನೆ. ಅದಕ್ಕೆ ಈ ತಾಯಿ, ತಾನು ಇಷ್ಟು ವರ್ಷಗಳ ಕಾಲ ಆತನಿಗಾಗಿ ಖರ್ಚು ಮಾಡಿರುವ ವಿವರ ಹೇಳಿ ಇನ್ನು ಮುಂದೆ ನೀನು ಬಳಸುವ ವಿದ್ಯುತ್, ನಿನಗಾಗಿ ಮೀಸಲಾಗಿರುವ ಕೊಠಡಿಗೆ ಬಾಡಿಗೆ, ಇಂಟರ್ನೆಟ್ ಬಿಲ್ ಎಲ್ಲವನ್ನೂ ಪಾವತಿಸು. ಇಲ್ಲವೆಂದರೇ ನಾನು ಹೇಳಿದಂತೆ ಕೇಳು ಎಂದು ಈ ಪತ್ರದಲ್ಲಿ ಹೇಳಿದ್ದು, ಅದೀಗ ಮಿಂಚಿನಂತೆ ಹರಿದಾಡುತ್ತಿದೆ.

‘ಈ ಘಟನೆ ಕಳೆದ ವಾರವಷ್ಟೇ ನಡೆದಿದ್ದು, ಮಗನಲ್ಲಿ ತುಸು ಬದಲಾವಣೆಗಳು ಕಾಣುತ್ತಿವೆ. ಇಗೀಗ ಹೇಳದ ಕೆಲಸಗಳನ್ನು ತಕ್ಷಣವೇ ಮಾಡುತ್ತಿದ್ದಾನೆ,’ ಎಂದು ಆ ತಾಯಿ ಮತ್ತೆ ಮಾಡಿದ ಪೋಸ್ಟ್‌ಗಳಲ್ಲಿ ಹೇಳಿಕೊಂಡಿದ್ದಾಳೆ.

Write A Comment