ನ್ಯೂಯಾರ್ಕ್ (ಎಎಫ್ಪಿ/ ರಾಯಿಟರ್ಸ್): ಸಾನಿಯಾ ಮಿರ್ಜಾ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿ ಯು ಭಾನುವಾರ ರಾತ್ರಿ ಮತ್ತೊಮ್ಮೆ ತಮ್ಮ ಸಾಮರ್ಥ್ಯ ಮೆರೆಯಿತು.
ಅಮೆರಿಕ ಓಪನ್ ಟೆನಿಸ್ ಟೂರ್ನಿಯಲ್ಲಿ ಮಹಿಳೆಯರ ಡಬಲ್ಸ್ ಪ್ರಶಸ್ತಿಗೆ ಮುತ್ತಿಕ್ಕಿದ ಸಾನಿಯಾ ಮತ್ತು ಹಿಂಗಿಸ್ ಸ್ವಿಟ್ಜರ್ಲೆಂಡ್ ದೇಶಗಳ ಟೆನಿಸ್ ಅಭಿಮಾನಿಗಳ ಸಂಭ್ರಮಕ್ಕೆ ಕಾರಣರಾದರು.
ಫೈನಲ್ ಪಂದ್ಯದಲ್ಲಿ ಸಾನಿಯಾ ಮತ್ತು ಹಿಂಗಿಸ್ 6–3, 6–3ರ ನೇರ ಸೆಟ್ಗಳಲ್ಲಿ ಆಸ್ಟ್ರೇಲಿಯಾದ ಕೆಸೆ ಡೆಲಾಕಾ ಮತ್ತು ಕಜಕಸ್ತಾನದ ಯರೊಸ್ಲಾವಾ ಶ್ವೆಡೋವಾ ಅವರನ್ನು ಮಣಿಸಿದರು.
ಶನಿವಾರ ಭಾರತದ ಲಿಯಾಂಡರ್ ಪೇಸ್ ಮತ್ತು ಮಾರ್ಟಿನಾ ಹಿಂಗಿಸ್ ಜೋಡಿಯು ಮಿಶ್ರ ಡಬಲ್ಸ್ ಕಿರೀಟ ಧರಿಸಿತ್ತು. ಸಾನಿಯಾ ಜೊತೆ ಜಯಿಸಿದ ಹಿಂಗಿಸ್ ಅಮೆರಿಕ ಓಪನ್ ಟೂರ್ನಿಯಲ್ಲಿ ಸತತ ಎರಡನೇ ಪ್ರಶಸ್ತಿ ಗೌರವ ಗಳಿಸಿದರು.
70 ನಿಮಿಷ ನಡೆದ ಪಂದ್ಯದಲ್ಲಿ ಅಗ್ರಶ್ರೇಯಾಂಕದ ಸಾನಿಯಾ–ಹಿಂಗಿಸ್ ಜೋಡಿಯು ನೆಟ್ ಬಳಿ ತೋರಿದ ಆಟ ಅಮೋಘವಾಗಿತ್ತು. ಶಿಸ್ತುಬದ್ಧ ಸರ್ವ್ಗಳು ಗೆಲುವಿನ ಹಾದಿಯನ್ನು ಸುಗಮಗೊಳಿಸಿದವು. ಈ ಜೋಡಿಯು ಇತ್ತೀಚೆಗೆ ವಿಂಬಲ್ಡನ್ ಟೂರ್ನಿಯಲ್ಲಿ ಮಹಿಳಾ ಡಬಲ್ಸ್ ಪ್ರಶಸ್ತಿ ಗೆದ್ದಿತ್ತು.
ಈ ಪ್ರಶಸ್ತಿಯೂ ಸೇರಿದಂತೆ ಸಾನಿಯಾ ಒಟ್ಟು ಐದು ಡಬಲ್ಸ್ ಮತ್ತು ಮೂರು ಮಿಶ್ರ ಡಬಲ್ಸ್ ಗ್ರ್ಯಾಂಡ್ಸ್ಲಾಮ್ ಪ್ರಶಸ್ತಿ ಗಳಿಸಿದ್ದಾರೆ. ಹಿಂಗಿಸ್ ಒಟ್ಟು 20 ಗ್ರ್ಯಾಂಡ್ಸ್ಲಾಮ್ ಗೆದ್ದಿದ್ದಾರೆ. ಪ್ರಸಕ್ತ ಋತುವಿನಲ್ಲಿ ಅವರು ಸತತ ಐದು ಪ್ರಶಸ್ತಿಗಳನ್ನು ತಮ್ಮದಾಗಿಸಿ ಕೊಂಡಿದ್ದಾರೆ.
ಸಾನಿಯಾ ಗೆದ್ದ
ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿಗಳು
ಮಹಿಳಾ ವಿಭಾಗದ ಡಬಲ್ಸ್
2015: ವಿಂಬಲ್ಡನ್ ಟೂರ್ನಿ
2015: ಅಮೆರಿಕ ಓಪನ್ ಟೂರ್ನಿ
ಮಿಶ್ರ ಡಬಲ್ಸ್ ವಿಭಾಗ
2009: ಆಸ್ಟ್ರೇಲಿಯಾ ಓಪನ್
2012: ಫ್ರೆಂಚ್ ಓಪನ್
2014: ಅಮೆರಿಕ ಓಪನ್