ಅಂತರಾಷ್ಟ್ರೀಯ

10 ಸಾವಿರ ಸಿರಿಯ ನಿರಾಶ್ರಿತರನ್ನು ಸ್ವೀಕರಿಸಲು ಒಬಾಮ ಆದೇಶ

Pinterest LinkedIn Tumblr

Obamaವಾಷಿಂಗ್ಟನ್, ಸೆ.11: ಮುಂದಿನ ವರ್ಷ ಕನಿಷ್ಠ 10 ಸಾವಿರ ಮಂದಿ ಸಿರಿಯ ನಿರಾಶ್ರಿತರಿಗೆ ರಾಷ್ಟ್ರದಲ್ಲಿ ಆಶ್ರಯ ಒದಗಿಸುವಂತೆ ತನ್ನ ಆಡಳಿತಕ್ಕೆ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಆದೇಶ ನೀಡಿದ್ದಾರೆ.

ಸಿರಿಯ ನಿರಾಶ್ರಿತರ ಬಿಕ್ಕಟ್ಟನ್ನು ಬಗೆಹರಿಸುವ ನಿಟ್ಟಿನಲ್ಲಿ ಅಮೆರಿಕವು ಯಾವುದೇ ಯತ್ನ ನಡೆಸಿಲ್ಲ ಎಂಬ ವ್ಯಾಪಕ ಟೀಕೆಯ ನಡುವೆಯೇ ಒಬಾಮ ಈ ಆದೇಶ ಹೊರಡಿಸಿದ್ದಾರೆ.

ಪ್ರಸಕ್ತ ವರ್ಷ ಜಾರಿಯಲ್ಲಿರುವ ಸಿರಿಯ ನಿರಾಶ್ರಿತರ ಪ್ರವೇಶದ ಮಿತಿಯು 1,500 ಆಗಿದ್ದು, ಮುಂದಿನ ವರ್ಷದ ಅಕ್ಟೋಬರ್ 1ರಿಂದ ಅನ್ವಯವಾಗುವಂತೆ ಅದನ್ನು ಕನಿಷ್ಠ 10 ಸಾವಿರಕ್ಕೆ ನಿಗದಿಪಡಿಬೇಕೆಂದು ಒಬಾಮ ಆದೇಶಿಸಿರುವುದಾಗಿ ಶ್ವೇತಭವನದ ವಕ್ತಾರ ಜೋಶ್ ಅರ್ನೆಸ್ಟ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಮೆರಿಕವು ಪ್ರತಿವರ್ಷ ಸುಮಾರು 70 ಸಾವಿರ ನಿರಾಶ್ರಿತರಿಗೆ ಪ್ರವೇಶ ನೀಡುತ್ತಿದೆಯಾದರೂ ಸಿರಿಯ ನಿರಾಶ್ರಿತರನ್ನು ಅದು ಕಡೆಗಣಿಸುತ್ತಿದೆ ಎನ್ನಲಾಗಿದೆ.

1 Comment

Write A Comment