ಅಂತರಾಷ್ಟ್ರೀಯ

ಸಂಗಾತಿಯನ್ನು ಕೊಲೆ ಮಾಡಿ ಶವದೊಂದಿಗೆ ಸೆಲ್ಫಿ ತೆಗೆದ ಹಂತಕ; ‘ದಯವಿಟ್ಟು ನನ್ನ ಸ್ವಾರ್ಥ ಪ್ರೀತಿಯನ್ನು ಕ್ಷಮಿಸಿಬಿಡಿ” ಎಂದು ಫೇಸ್ಬುಕ್ ನಲ್ಲಿ ಫೋಟೋಗೆ ಶೀರ್ಷಿಕೆ ನೀಡಿದ್ದ !

Pinterest LinkedIn Tumblr

PAY-Murder

ಬೀಜಿಂಗ್: ಚೈನಾದಲ್ಲಿ ನಡೆದಿರುವ ಆಘಾತಕಾರಿ ಘಟನೆಯೊಂದರಲ್ಲಿ ತನ್ನ ವಿವಾಹಪೂರ್ವ ಸಂಗಾತಿಯನ್ನು ಕೊಲೆ ಮಾಡಿ ಶವದೊಂದಿಗೆ ಸೆಲ್ಫಿ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಿದ ನಂತರ ಅವನನ್ನು ಪೊಲೀಸರು ಬಂಧಿಸಿದ್ದಾರೆ.

‘ದಯವಿಟ್ಟು ನನ್ನ ಸ್ವಾರ್ಥ ಪ್ರೀತಿಯನ್ನು ಕ್ಷಮಿಸಿಬಿಡಿ” ಎಂದು ಆ ಫೋಟೋಗೆ ಶೀರ್ಷಿಕೆ ನೀಡಿದ್ದ ಯುವಕ.

ಆರೋಪಿ ಕ್ವಿನ್ ಮತ್ತು ಸಂತ್ರಸ್ತೆ ‘ಲಿನ್’ಳ ನಡುವೆ ನಡೆದ ಜಗಳ ತಾರಕಕ್ಕೇರಿ ಹಿಂಸಾತ್ಮಕ ರೂಪ ಪಡೆದು ಕ್ವಿನ್, ಲಿನ್ ಳನ್ನು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ. ನಂತರ ಶವದೊಂದಿಗೆ ಸೆಲ್ಫಿ ತೆಗೆದ ಕ್ವಿನ್, ತಾವಿಬ್ಬರೂ ಸಂತಸದೊಂದಿದ್ದ ಫೋಟೋದೊಂದಿಗೆ ಈ ಫೋಟೊವನ್ನು ಕೂಡ ಅಪ್ಲೋಡ್ ಮಾಡಿದ್ದಾನೆ. ಇದು ನಂತರ ವೈರಲ್ ಆಗಿದೆ.

ನಂತರ ಈ ಯುವಕನ ಬೆನ್ನು ಹತ್ತಿದ ಪೊಲೀಸರು ೯ ಘಂಟೆಗಳ ನಂತರ ಕ್ವಿನ್ ನನ್ನು ಬಂಧಿಸಲು ಯಶಸ್ವಿಯಾಗಿದ್ದಾರೆ. ಆದರೆ ಲಿನ್ ಸಾವಿನ ಬಗ್ಗೆ ಪ್ರತಿಕ್ರಿಯಿಸಲು ಅಧಿಕಾರಿಗಳು ನಿರಾಕರಿಸಿದ್ದಾರೆ.

Write A Comment