ಅಂತರಾಷ್ಟ್ರೀಯ

ಹೆಚ್ಚೆಚ್ಚು ತಿನ್ನಬೇಡಿ..ತಿಂದರೆ ಸಾವು ಖಚಿತ ! ಇಲ್ಲೊಬ್ಬಳು 20 ವರ್ಷದ ಯುವತಿ ತಿಂದೂ ತಿಂದೂ ತೂಕ 254 ಕೆ.ಜಿ ಹೆಚ್ಚಿಸಿ…ಸಾವನ್ನಪ್ಪಿದ್ದಾಳೆ..ಈ ವರದಿ ಓದಿ..

Pinterest LinkedIn Tumblr

samantha

ಲಂಡನ್: ಬಾಯಿ ಚಪಲಕ್ಕೆ ಸಿಕ್ಕಿದ್ದನ್ನೆಲ್ಲಾ ತಿಂದು ತೇಗುವವರು ನೀವಾಗಿದ್ದರೆ ಸ್ವಲ್ಪ ಎಚ್ಚರದಿಂದಿರಿ. ಇಲ್ಲಾಂದ್ರೆ ಸಾವು ನಿಮ್ಮನ್ನೂ ಬಂದು ಕಾಡಬಹುದು. ಹೌದು, ಲಂಡನ್‍ನಲ್ಲಿ ಇಂಥದ್ದೇ ಒಂದು ಘಟನೆ ನಡೆದಿದೆ. ತಿಂದು ತಿಂದು 254 ಕೆಜಿ ತೂಕ ತಲುಪಿದ್ದ 20 ವರ್ಷದ ಸಮಂತಾ ಪ್ಯಾಕ್‍ಹಾಮ್ ಎಂಬ ಯುವತಿಯೊಬ್ಬಳು ಸಾವನ್ನಪ್ಪಿದ್ದಾಳೆ.

samantha2

samantha1

ಸಮಂತಾ ತಿನ್ನುವ ಚಟಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ಆಕೆಯ ಪೋಷಕರು ಕಳೆದ ಮೂರು ವರ್ಷದಿಂದ ಆಕೆಯನ್ನು ಮನೆಯಿಂದ ದೂರವಿಟ್ಟಿದ್ದರು. ಮಿತಿ ಮೀರಿ ತಿನ್ನುತ್ತಿದ್ದುದರಿಂದ ಸಮಂತಾಳ ಹಲವು ಅಂಗಾಂಗಗಳು ಕೆಲಸ ಮಾಡುವುದನ್ನು ನಿಲ್ಲಿಸಿದ್ದವು. ಕೊನೆಗೆ ಆಕೆಯ ಹೃದಯವೂ ಸ್ತಬ್ಧವಾಗಿ ಆಕೆ ಸಾವನ್ನಪ್ಪಿದಳು ಎಂದು ಲಂಡನ್‍ನ ಮಾಧ್ಯಮಗಳು ವರದಿ ಮಾಡಿವೆ.

ಎಚ್ಚರವಿಡಿ: ಆದರೆ ಮಗಳ ಸುದ್ದಿನ ಸಾವಿನ ಸುದ್ದಿ ತಿಳಿದ ಸಮಂತಾ ಪೋಷಕರಿಗೂ ತಮ್ಮ ತಪ್ಪಿನ ಅರಿವಾಗಿದೆ. ಹೀಗಾಗಿ ನಮ್ಮ ಮಗಳಂತೆ ಇನ್ಯಾರಿಗೂ ಹೀಗಾಗದಿರಲಿ ಎಂದು ಆಕೆಯ ಪೋಷಕರು ಮಗಳ ತಿನ್ನುವ ಚಟವನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ಈ ಬಗ್ಗೆ ಮಾತನಾಡಿದ ಸಮಂತಾ ತಂದೆ ಮೆಕಂ, ನಮ್ಮ ಮಗಳ ಸಾವಿಗೆ ನಾವೇ ಕಾರಣ. ನಾವು ತಪ್ಪು ಮಾಡಿದ್ದೇವೆ ಎಂದು ನಾವು ಒಪ್ಪಿಕೊಳ್ಳುತ್ತೇವೆ. ನಾವು ಆಕೆಯ ಆಹಾರದ ಮೇಲೆ ಶ್ರದ್ಧೆ ಇಡಬೇಕಿತ್ತು ಎಂದಿದ್ದಾರೆ. ಆದರೆ ಯಾರಾದರೂ ಕಡಿಮೆ ತಿನ್ನಲು ಬಯಸದಿದ್ದರೆ ನಾವೇನೂ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Write A Comment