ಅಂತರಾಷ್ಟ್ರೀಯ

ರಕ್ತದೋಕುಳಿಯಲ್ಲಿ ಮಿಂದೆದ್ದ ಯುವಕ ಯುವತಿಯರು!

Pinterest LinkedIn Tumblr

ww

ಆಮ್‍ಸ್ಟರ್‍ಡ್ಯಾಮ್: ಇತ್ತೀಚಿನ ದಿನಗಳಲ್ಲಿ ಸೌಂದರ್ಯ ಹೆಚ್ಚಿಸಿಕೊಳ್ಳಲು ರಕ್ತದಲ್ಲಿ ಸ್ನಾನಮಾಡುವುದನ್ನು ಕೇಳಿದ್ದೇವೆ. ಇದೀಗ ಈ ಆಚರಣೆ ಕ್ಲಬ್ ಪಾರ್ಟಿಗೂ ಬಂದಿದ್ದು, ಫೇಸ್‍ಬುಕ್‍ನಲ್ಲಿ ಇಂತಹ ಫೋಟೋಗಳು ಹರಿದಾಡುತ್ತಿವೆ.

ಹೌದು. ಆಮ್‍ಸ್ಟರ್‍ಡ್ಯಾಮ್‍ನ ಹಾಲೋವೀನ್‍ನ ಕ್ಲಬ್‍ವೊಂದರಲ್ಲಿ ರಕ್ತದೋಕುಳಿಯಲ್ಲಿ ಯುವಕ ಯುವತಿಯರು ಮಿಂದೆಂದಿದ್ದಾರೆ. ಫೇಸ್‍ಬುಕ್‍ನಲ್ಲಿ ಅಪ್‍ಲೋಡ್ ಆಗಿರುವ ಈ ಫೋಟೋಗಳಲ್ಲಿ ಇದು ನಿಜವಾದ ರಕ್ತವೋ ಅಥವಾ ಕೃತಕ ರಾಸಾಯನಿಕಗಳನ್ನು ಬಳಕೆ ಮಾಡಿದ್ದಾರೋ ಎನ್ನುವುದು ತಿಳಿದುಬಂದಿಲ್ಲ.

1998 ಮೂಡಿಬಂದ ವ್ಯಾಂಪೈರ್ ಕಥೆಯಾಧಾರಿತ ಬ್ಲೇಡ್ ಸಿನಿಮಾದಿಂದ ಪ್ರೇರಿತರಾಗಿ ಈ ರಕ್ತದ ಪಾರ್ಟಿ ಆಯೋಜನೆ ಮಾಡಲಾಗಿತ್ತೆಂದು ಹೇಳಲಾಗುತ್ತಿದೆ. ಇನ್ನು ಕೆಲವರು ಇದು ಹಂದಿ ಅಥವಾ ದನದ ರಕ್ತವೆಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಈ ಪಾರ್ಟಿಗೆ ಬಂದಿದ್ದ ಕೆಲವರು ವ್ಯಾಂಪೈರ್‍ಗಳ ರೀತಿಯಲ್ಲಿ ವೇಷ ಧರಿಸಿದ್ದು ಕಂಡುಬಂದಿತ್ತು.

ಇನ್ನು ಈ ಪಾರ್ಟಿಯಲ್ಲಿ 4100 ಜನರು ಪಾಲ್ಗೊಂಡಿದ್ದರು ಎನ್ನಲಾಗಿದ್ದು, ಇನ್ನು ಒಂದು ಟಿಕೆಟ್‍ಗೆ 17.93 ಪೌಂಡ್ (1800 ರೂ.) ನಿಗದಿಯಾಗಿತ್ತು. ಒಟ್ಟಿನಲ್ಲಿ ಈ ರೀತಿಯಾದ ಪಾರ್ಟಿಯನ್ನು ಆಯೋಜನೆ ಮಾಡಿರುವುದು ಚರ್ಚೆಗೆ ಗ್ರಾಸವಾಗಿದೆ.

Write A Comment