ಅಂತರಾಷ್ಟ್ರೀಯ

ವಿಶ್ವದ ಅತಿ ಕುಳ್ಳ ವ್ಯಕ್ತಿ ಇನ್ನಿಲ್ಲ

Pinterest LinkedIn Tumblr

ssss

ಮುಂಬೈ/ ಕಠ್ಮಂಡು, ಸೆ.5: ವಿಶ್ವದ ಅತಿ ಕುಳ್ಳ ವ್ಯಕ್ತಿ ಎಂದು ಖ್ಯಾತರಾಗಿದ್ದ 55 ಸೆಂಟಿಮೀಟರ್ ಎತ್ತರದ ನೇಪಾಳ ಮೂಲದ ಚಂದ್ರ ಬಹದ್ದೂರ್ ಡಾಂಗಿ ಅವರು ನಿನ್ನೆ ನಿಧನರಾಗಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

75 ವರ್ಷ ವಯಸ್ಸಿನ ಚಂದ್ರ ಬಹದ್ದೂರ್ ಡಾಂಗಿ ವೃದ್ಧಾಪ್ಯಕ್ಕೆ ಸಂಬಂಧಿಸಿದ ಕಾಯಿಲೆಗಳಿಂದ ಬಳಲುತ್ತಿದ್ದು, ಕೆಲ ದಿನಗಳ ಹಿಂದೆ ಸ್ಥಳೀಯ ಫಿಲಿಪೈನ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚಿಕಿತ್ಸೆ ಫಲಕಾರಿಯಾಗದೇ ನಿನ್ನೆ ಕೊನೆಯುಸಿರೆಳೆದಿದ್ದಾರೆ.

sssss

sss

ss

ds

32

ಇನ್ನು ಗಿನ್ನಿಸ್ ದಾಖಲೆ ಪಡೆದ ನಂತರ ಡಾಂಗಿ ನೇಪಾಳ ಮತ್ತು ವಿದೇಶಗಳಾದ್ಯಂತ ಪ್ರವಾಸ ಕೈಗೊಂಡು ಜನರ ಗಮನ ಸೆಳೆದಿದ್ದರು.

ಱ್ಯಾಂಬೊ ಸರ್ಕಸ್ ಹಾಗೂ ಬ್ರೂನೋ ಸರ್ಕಸ್ ಎರಡೂ ವಿಭಿನ್ನ ಸಂಸ್ಕೃತಿಯ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಗಮನ ಸೆಳೆದಿದ್ದ ಡಾಂಗಿ ಫೆಡರೇಷನ್ ಮೊಂಡಿಯೇಲ್ ಜಾಗತಿಕವಾಗಿ ಪ್ರತಿನಿಧಿಸುವ ಅಂತಾರಾಷ್ಟ್ರೀಯ ಮಂಡಳಿಯ ಸದಸ್ಯ ಹಾಗೂ ಕಲಾವಿದರಾಗಿ ಕಾರ್ಯನಿರ್ವಹಿಸಿದ್ದರು.

ಕೇವಲ 12 ಕೆಜಿ ತೂಕ ಹೊಂದಿದ್ದ ಅವರು ತಮ್ಮ ಆರೋಗ್ಯ ನಿರ್ವಹಣೆಗಾಗಿ ನಿತ್ಯ ಸ್ವಲ್ಪ ಚಿಕನ್ ತುಂಡು ಹಾಗೂ ಸ್ವಲ್ಪ ಅನ್ನವನ್ನು ಆಹಾರವಾಗಿ ತೆಗೆದುಕೊಳ್ಳುತ್ತಿದ್ದರು.

ಡಾಂಗಿ ಅವರು ನೇಪಾಳದ ಗ್ರಾಮವೊಂದರಲ್ಲಿ ಇತರ ವ್ಯಕ್ತಿಗಳಂತೆ ಸರಳ ಜೀವನ ನಡೆಸುತ್ತಿದ್ದರು.

Write A Comment