ಅಂತರಾಷ್ಟ್ರೀಯ

ಸಂಭೋಗಕ್ಕೆ ಅತ್ಯುತ್ತಮ ಸಮಯ ಯಾವುದು ಗೊತ್ತೇ? ಬೆಳಗಿನ ಜಾವ 5:48

Pinterest LinkedIn Tumblr

Morning-sexಲಂಡನ್: ಸಂಭೋಗಕ್ಕೆ ಅತ್ಯುತ್ತಮವಾದ ಸಮಯ ಯಾವುದೆಂದು ನಿಮಗೆ ತಿಳಿದಿದೆಯೇ? ಅದು ಕತ್ತಲ ಸಮಯವಲ್ಲ ಎಂದರೆ ನಿಮಗೆ ಆಶ್ಚರ್ಯವಾಗಬಹುದು, ಹೌದು ನೀವು ಯೋಗ ಮಾಡುವ ಅಥವಾ ಬೆಳಗಿನ ವಾಯುವಿಹಾರಕ್ಕೆ ಸಿದ್ಧವಾಗುವ ಸಮಯ ಅದು ಎನ್ನುತ್ತದೆ ನೂತನ ಅಧ್ಯಯನವೊಂದು. ಅದುವೆ ೫:೪೮ ಎ ಎಂ.

ಇಟಲಿಯ ಸಂಶೋಧಕರ ಪ್ರಕಾರ ಲೈಂಗಿಕ ಕ್ರಿಯೆಗೆ ಅತಿ ಅವಶ್ಯಕವಾದ ಟೆಸ್ಟಾಸ್ಟೆರೋನ್ ಮಟ್ಟ ಪುರುಷರಲ್ಲಿ ಹಾಗೂ ಮಹಿಳೆಯರಲ್ಲಿ ಬೆಳಗಿನ ಜಾವದಲ್ಲಿ ಹೆಚ್ಚಿರುತ್ತದಂತೆ.

“ಇಬ್ಬರಲ್ಲೂ ಶಕ್ತಿ ಹೆಚ್ಚಿರುತ್ತದೆ. ಮಾನಸಿಕವಾಗಿ ಕೂಡ ಜೀವನದ ಜಂಜಾಟದಿಂದ ಅಷ್ಟು ವಿಚಲಿತರಾಗಿವುದಿಲ್ಲ. ಆದುದರಿಂದ ಅದು ನಿಖರ ಸಮಯ” ಎನ್ನುತ್ತಾರೆ ಲೈಂಗಿಕ ತಜ್ಞ ಜೆರಾಲ್ಡಿನ್ ಮೇಯರ್ಸ್ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಸಂಶೋಧಕರು ಬೆಳಗಿನ ಜಾವ ೫:೪೮ ಘಂಟೆ ಸಂಭೋಗಕ್ಕೆ ಸರಿಯಾದ ಸಮಯ ಎಂದು ತಿಳಿಸಿದ್ದಾರೆ. “ಸಂಗಾತಿಗಳು ಉದ್ರೇಕತೆಯ ಪಾರಕಾಷ್ಟೆಯನ್ನು ತಲುಪುವುದು ಇದೇ ಸಮಯದಲ್ಲಿ” ಎಂದು ಈ ಸಂಶೋಧನೆಯ ಲೇಖಕರು ತಿಳಿಸಿದ್ದಾರೆ.

ಪುರುಷರು ಬೆಳಗ್ಗೆ ಕಣ್ಣು ಬಿಡುವುದಕ್ಕೂ ಮುಂಚಿತವಾಗಿಯೇ ಅವನ ಟೆಸ್ಟಾಸ್ಟೆರೋನ್ ಮಟ್ಟ ತುತ್ತತುದಿಯಲ್ಲಿರುತ್ತದೆ. ದಿನದ ಬೇರೆ ಸಮಯಕ್ಕಿಂತ ಶೇಕಡಾ ೨೫ ರಿಂದ ೫೦ ರಷ್ಟು ಹೆಚ್ಚಿರುತ್ತದೆ ಎಂದು ಅಧ್ಯಯನ ತಿಳಿಸಿದೆ.

Write A Comment