ನಿಮ್ಮ ಮಕ್ಕಳು ವಿಡಿಯೋ ಗೇಮ್ ಆಡ್ತಾರಾ..? ಅಯ್ಯೋ ಎಷ್ಟು ಚೆನ್ನಾಗಿ ಆಡ್ತಾನೆ ನಮ್ಮತ್ರೂ ಆ ತರಾ ಆಡಕ್ಕೆ ಬರಲ್ಲ ಅಂತೀರಾ..? ಹಾಗಿದ್ರೆ ಈ ಸುದ್ದಿ ಓದಿ.
ಹೌದು. ಹಿಂಸಾತ್ಮಕ ವಿಡಿಯೋ ಗೇಮ್ ಗಳು ವ್ಯಕ್ತಿಯ ವರ್ತನೆಯ ಮೇಲೆ ವ್ಯತಿರಿಕ್ತ ಪ್ರಭಾವ ಬೀರುತ್ತಿದ್ದು, ಇಂತಹ ಗೇಮ್ ನಿಂದ ವ್ಯಕ್ತಿ ಹೆಚ್ಚು ಹೆಚ್ಚು ಕೋಪಿಷ್ಟನಾಗುವುದರ ಜತೆಗೆ ಸಮಾಜದ ಜತೆಗಿನ ಬಾಂಧವ್ಯವನ್ನು ಕಳೆದುಕೊಳ್ಳುತ್ತಾನೆ ಎಂಬ ಆಘಾತಕಾರಿ ಅಂಶವೊಂದನ್ನು ಸಂಶೋಧನೆಯೊಂದು ಬಹಿರಂಗಪಡಿಸಿದೆ.
ಅದರಲ್ಲಿಯೂ ಹಿಂಸಾತ್ಮಕ ವಿಡಿಯೋ ಗೇಮ್ ಗಳು ವ್ಯಕ್ತಿಯಲ್ಲಿ ಕೋಪ ಮತ್ತು ಆಕ್ರಮಣಶೀಲತೆ ಹೆಚ್ಚಲು ಕಾರಣವಾಗಿದ್ದು ಹಿಂಸಾತ್ಮಕ ವಿಡಿಯೋ ಗೇಮ್ ಆಡುವವರು ಹಿಂಸಾತ್ಮಕ ಮತ್ತು ಅಪರಾಧ ಕೃತ್ಯದಲ್ಲಿ ತೊಡಗುವ ಪ್ರವೃತ್ತಿಯವರಾಗುತ್ತಾರೆ ಎಂಬುದನ್ನು ನ್ಯೂ ಅಮೆರಿಕನ್ ಸೈಕಾಲಜಿಕಲ್ ಅಸೋಸಿಯೇಷನ್ (ಎಪಿಎ) ಸಂಶೋಧಕರು ವಿವರಿಸಿದ್ದಾರೆ.
ಅಲ್ಲದೇ 2009 ರಿಂದ 2013ರ ಅವಧಿಯಲ್ಲಿ ವಿವಿಧ ಸಂಶೋಧಕರು ಈ ವಿಷಯದ ಮೇಲೆ ಸಂಶೋಧನೆ ನಡೆಸಿದ್ದು, ಈ ಸಂಶೋಧನೆಯಿಂದ ವ್ಯಕ್ತಿಯಲ್ಲಿ ಕೋಪ ಮತ್ತು ಆಕ್ರಮಣಶೀಲತೆ ಹೆಚ್ಚಲು ಹಿಂಸಾತ್ಮಕ ವಿಡಿಯೋ ಗೇಮ್ ಗಳ ಪ್ರಭಾವ ಹೆಚ್ಚಿದೆ ಎಂಬುದೂ ಗಮನಕ್ಕೆ ಬಂದಿದೆ.