ಜಕಾರ್ತ್: 49 ಮಂದಿ ಪ್ರಯಾಣಿಕರು ಸೇರಿದಂತೆ ನಾಲ್ವರು ವಿಮಾನಯಾನ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಇಂಡೋನೇಷಿಯಾದ ಪ್ಯಾಸೆಂಜರ್ ಏಟಿಆರ್42-300 ವಿಮಾನ ನಾಪತ್ತೆಯಾಗಿದೆ.
ಪಪುವಾದ ಒಕ್ಸಿಬಿಲ್ ನಗರದದಿಂದ ಹೊರಟ ವಿಮಾನ ಸ್ಥಳೀಯ ಕಾಲಮಾನ ಮಧ್ಯಾಹ್ನ 3 ಗಂಟೆ ಸುಮಾರಿಗೆ ನಿಯಂತ್ರಣ ಕೊಠಡಿಯಿಂದ ಸಂಪರ್ಕ ಕಡಿತಗೊಂಡಿದ್ದು,
ಪಪುವಾದ ಹಿಮಾಚ್ಛಾದಿತ ಪ್ರದೇಶದಲ್ಲಿ ನಾಪತ್ತೆಯಾಗಿರುವ ಶಂಖೆ ವ್ಯಕ್ತವಾಗಿದೆ.
ತ್ರಿಗನ ಏರ್ ಸರ್ವೀಸ್ ಗೆ ಸೇರಿದ ಪ್ಯಾಸೆಂಜರ್ ವಿಮಾನ ಟೇಕ್ ಆಫ್ ಆದ 33 ನಿಮಿಷಗಳಲ್ಲೇ ನಿಯಂತ್ರಣ ಕೊಠಡಿಯಿಂದ ಸಂಪರ್ಕ ಕಡಿದುಕೊಂಡಿದೆ ಎಂದು ಸಾರಿಗೆ ಸಚಿವಾಲಯದ ವಕ್ತಾರ ಜೂಲಿಯಸ್ ಭರಟ ಹೇಳಿದ್ದಾರೆ.