ಅಂತರಾಷ್ಟ್ರೀಯ

ಅಮೆರಿಕ ಮೇಲೆ ದಾಳಿ ನಡೆಸಿ: ಜಿಹಾದಿಗಳಿಗೆ ಒಸಾಮಾ ಮಗ ಮನವಿ

Pinterest LinkedIn Tumblr

osamaವಾಷಿಂಗ್ಟನ್: ಉಗ್ರರ ಮುಖ್ಯಸ್ಥನೆಂದೇ ಗುರುತಿಸಿಕೊಳ್ಳುವ ಒಸಾಮಾ ಬಿನ್ ಲಾಡೆನ್ ಪುತ್ರ ಹಮ್ಜಾ, ಅಲ್ ಖೈದಾ ಬೆಂಬಲಿಗರಿಗೆ, ಅಮೆರಿಕ ಹಾಗೂ ಮಿತ್ರ ರಾಷ್ಟ್ರಗಳನ್ನು ಸುತ್ತುವರಿದು ದಾಳಿ ನಡೆಸಲು ಸೂಚಿಸಿದ್ದಾನೆ.

20 ವರ್ಷ ವಯಸ್ಸಿನ, ತಲೆ ಮರೆಸಿಕೊಂಡಿರುವ ಆಲ್ ಖೈದಾ ಮುಖ್ಯಸ್ಥನ ಮಗ, ವಾಷಿಂಗ್ಟನ್, ಡಿಸಿ, ಪ್ಯಾರಿಸ್ ಮತ್ತು ತೆಲ್ ಅವಿವ್‌ ಸುತ್ತುವರಿದು ದಾಳಿ ನಡೆಸುವಂತೆ ವೀಡಿಯೋ ಸಂದೇಶ ರವಾನಿಸಿದ್ದಾನೆ.

‘ಇದು ನಿಮ್ಮ ಕರ್ತವ್ಯ,’ ಎಂದು ಹೇಳಿರುವ ಹಮ್ಜಾ, ಮಧ್ಯ ಪೂರ್ವ ಮೈತ್ರಿ ರಾಷ್ಟ್ರಗಳಾದ ಅಮೆರಿಕ, ಜಿವಿಶ್ ಅಮೆರಿಕನ್ನರ ಮೇಲೆ ಜಿಹಾದಿ ಯುದ್ಧ ಸಾರುವಂತೆ ಹೇಳಿದ್ದಾನೆ, ಎಂದು ಸೈಟ್ ಇಂಟಿಲೆಜೆನ್ಸ್ ಗ್ರೂಪ್ ಹೇಳಿದೆ.

ಬಿನ್ ಲಾಡೆನ್‌ ‘ಹತ್ಯಾಕಾಂಡ’ ಮಾದರಿಯನ್ನು ನವೀಕರಿಸಲು ಆಲ್ ಖೈದಾ ಚಿಂತಿಸುತ್ತಿದೆ, ಎಂದು ಗ್ರೂಪ್‌ ಕಾರ್ಯಕಾರಿ ನಿರ್ದೇಶಕರಾದ ರಿತಾ ಕಾಟ್ಸ್ ಹೇಳಿದ್ದಾರೆ.

9/11ರ ಘಟನೆಯ ನಂತರ ಹಮ್ಜಾ ವಯಸ್ಕ ಉಗ್ರರಿಗೆ ಪದ್ಯ ಓದಿ ಹೇಳುವ ಫೋಟೋವನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡಲಾಗುವುದು, ಎನ್ನಲಾಗಿದೆ.

2011ರಲ್ಲಿ ಲಾಡೆನ್ ಮೇಲೆ ಅಮೆರಿಕ ನೇವಿ ಸೀಲ್ ದಾಳಿ ನಡೆಸಿದಾಗ, ಪಾಕಿಸ್ತಾನದಿಂದ ಹಮ್ಜಾ ತಪ್ಪಿಸಿಕೊಂಡಿದ್ದ.

ಮುಗ್ಧ ಮುಖದ ಭಯೋತ್ಪಾದಕ, ಈ ವೀಡಿಯೋದಲ್ಲಿ ಇತ್ತೀಚೆಗೆ ಮೃತನಾದ ತಾಲಿಬಾನ್ ನಾಯಕ ಮುಲ್ಲಾ ಒಮರ್‌ಗೆ ದಾಳಿ ನಡೆಸಲು ವಿನಂತಿಸಿಕೊಂಡಿದ್ದು, ಜೂನ್‌ ಮುಂಚೆಯೇ ಚಿತ್ರೀಕರಿಸಿಕೊಂಡಿರಬಹುದೆನ್ನಲಾಗಿದೆ, ಎಂದು ನ್ಯಾಯಾರ್ಕ್ ಡೈಲಿ ನ್ಯೂಸ್ ವರದಿ ಮಾಡಿದೆ.

Write A Comment