ಅಂತರಾಷ್ಟ್ರೀಯ

ಉತ್ಸಾಹ, ಆನಂದ ಪಡೆಯಲು…

Pinterest LinkedIn Tumblr

hannuಇಂದಿನ ವೇಗವಾದ ಜಗತ್ತಿನಲ್ಲಿ ಪ್ರತಿಯೊಬ್ಬನೂ ಓಡುತ್ತಿದ್ದಾನೆ. ಪುರುಷರೊಂದಿಗೆ ಮಹಿಳೆಯರಿಗೂ ಹಲವು ಜವಾಬ್ದಾರಿಗಳು ಇರುತ್ತವೆ. ದಿನವೆಲ್ಲ ದುಡಿಯುವುದರಿಂದ ದಣಿವು ಹಾಗೂ ಉದಾಸೀನತೆ ಉಂಟಾಗುತ್ತದೆ. ಹಸಿವು ಆಗುವುದಿಲ್ಲ, ನಿದ್ರೆ ಬರುವುದಿಲ್ಲ, ಮನಸ್ಸು ಸಂಶಯಗ್ರಸ್ತವಾಗಿರುತ್ತದೆ. ಆಗೇನು ಮಾಡಬಹುದು?

ಆಶಾವಾದಿಯಾಗಿರಿ: ಪ್ರತಿಯೊಂದು ಸಂಗತಿ ಬಗೆಗೂ ಆಶಾವಾದಿಗಳಾಗಿರಿ. ನಿತ್ಯದ ಕೆಲಸಗಳ ಕ್ರಮಾನುಸಾರ ಪಟ್ಟಿ ತಯಾರಿಸಿ. ತಮಗೆ ಸಿಗಬೇಕಾದ, ಮಾಡಬೇಕಾದ ಸಂಗತಿಗಳನ್ನು ಅವುಗಳ ಪ್ರಾಮುಖ್ಯತೆಗೆ ಅನುಸಾರವಾಗಿ ಬರೆದಿಡಿ.

ಸಂಗೀತ, ಬಣ್ಣ: ಸುಗಮ ಸಂಗೀತ, ಫಾಸ್ಟ್ ಮ್ಯೂಸಿಕ್, ಲಯಬದ್ಧ ಸ್ವರಗಳು ಉತ್ಸಾಹವನ್ನು ತುಂಬುತ್ತವೆ. ಹಳದಿ, ಕೆಂಪು, ಅರೆ ನೀಲಿ ಮುಂತಾದ ಕೆಲ ವಿಶೇಷ ಬಣ್ಣಗಳು ಉತ್ಸಾಹದ ಬಣ್ಣಗಳೆಂದು ಹೇಳುತ್ತಾರೆ. ಅವುಗಳನ್ನು ಬಳಸಬೇಕು.

ಉಪಚಾರಗಳು: ಕೆಲ ಬಾರಿ ಶರೀರದಲ್ಲಿರುವ ರಕ್ತದಲ್ಲಿ ಲೋಹದ ಅಂಶ ಕಡಿಮೆಯಾಗುವುದರಿಂದ ದಣಿವು ಮತ್ತು ಉದಾಸೀನತೆ ಬರಬಹುದು. ಥೈರಾಯಿಡ್ ವಿಕಾರದಿಂದ ಸುಸ್ತು ಅನ್ನಿಸಬಹುದು. ಅದಕ್ಕಾಗಿ ಪರೀಕ್ಷೆಗಳನ್ನು ಮಾಡಿಸುವುದು ಅವಶ್ಯಕ.

ನಿಸಗೋಪಚಾರ: ಕಣ್ಣುಗಳ ಮೇಲೆ ಹಾಗೂ ಹಣೆಯ ಮೇಲೆ ಗುಲಾಬಿ, ನೀರಿನ ಬಟ್ಟೆಯನ್ನು ಇಡುವುದು. ಸಂತುಲಿತ ಆಹಾರ, ಸಾಕಷ್ಟು ನೀರು, ತೆರೆದ ಹವೆಯಲ್ಲಿ ತಿರುಗುವುದು.

ಎರೋಮಾ ಥೆರಪಿ: 20 ಹನಿ ರೋಜ್​ವುಡ್ ಆಯಿಲ್ (ತೈಲ), 5 ಹನಿ ಆರೇಂಜ್ ಆಯಿಲ್, 50 ಮಿಲಿ ಜಿರ್ಯಾನಿಯಮ್​ಆಯಿಲ್, ಎಳ್ಳೆಣ್ಣೆ ಅಥವಾ ಕಾರ್ನ್ ಆಯಿಲಿನಲ್ಲಿ ಬೆರೆಸಿ ಬಾಡಿ ಮಸಾಜ್ ಮಾಡಿದರೆ ತಕ್ಷಣ ಉತ್ಸಾಹವೆನಿಸುತ್ತದೆ. ಇಲ್ಲವೇ ಈ ಆಯಿಲ್​ಗಳನ್ನು ಸ್ನಾನದ ನೀರಿನಲ್ಲಿ ಬೆರೆಸಿದರೂ ಉತ್ತಮ ಫಲಿತಾಂಶ ಬರುತ್ತದೆ.

ಹೋಮಿಯೋಪಥಿ: ರಕ್ತದಲ್ಲಿನ ಹಿಮೋಗ್ಲೋಬಿನ್ ಕಡಿಮೆ ಆಗುವುದು, ಉದಾಸೀನತೆ ಉಂಟಾದರೆ ಹೋಮಿಯೋಪಥಿ ಉತ್ತಮ ವಿಧಾನ.

ನ್ಯಾಟ್ರಮ್ೋರ್: ಮಹಿಳೆಯರಲ್ಲಿ ದಣಿವಿನ ನಂತರ ಬರುವ ಕೈ-ಕಾಲು, ಸೊಂಟ ನೋವು ಮುಂತಾದವುಗಳ ಮೇಲಿನ ಗುಣಕಾರಿ ಔಷಧ.

ಸೋಪಿಯಾ, ಕ್ಯಾಕ್ಲೇರಿಯಾ ಕಾರ್ಬ್: ಮಾಸಿಕ ರಜೋದರ್ಶನದ ಮೊದಲು ಅಥವಾ ನಂತರದ ಅಶಕ್ತತೆಯ ಮೇಲೆ ಉಪಯುಕ್ತ.

ಪುಷ್ಪೌಷಧ: ಅತಿಯಾದ ಕೆಲಸ ಮಾಡುವುದರಿಂದ ದಣಿವಿನ ಮೇಲೆ ಪುಷ್ಪೌಷಧಗಳು ಉಪಯುಕ್ತ.

ಆಕ್ಯುಪ್ರೆಷರ್, ಆಕ್ಯುಪಂಕ್ಚರ್: ಆಕ್ಯುಪ್ರೆಷರ್ ಪಾಯಿಂಟ್ಸ್ 22, 28, 66, 81ರ ಮೇಲೆ ಬೆರಳಿನ ತುದಿಯಿಂದ ಅಥವಾ ಆಕ್ಯುಪಂಕ್ಚರಿನ ನೀಡಲ್​ನಿಂದ ಒತ್ತುವುದರಿಂದ ದಣಿವು ಕಡಿಮೆಯಾಗುತ್ತದೆ.

***

ಆಹಾರ

ಆಹಾರದಲ್ಲಿ ಪೌಷ್ಟಿಕಾಂಶ ವಿರುವ ಪದಾರ್ಥಗಳನ್ನು ಸಾಕಷ್ಟು ಪ್ರಮಾಣದಲ್ಲಿ ಬಳಸಬೇಕು. ಅವುಗಳಿಂದ ರಕ್ತದಲ್ಲಿರುವ ಸಿರೋಟೋನಿನ ಮಟ್ಟ ಸರಿಯಾಗಿರುವುದು. ನಿದ್ದೆ ಚೆನ್ನಾಗಿ ಹತ್ತುತ್ತದೆ. ನಿತ್ಯ ಒಂದು ಸಿಟ್ರಸ್ (ಲಿಂಬೆ, ಕಿತ್ತಳೆ, ಮೂಸಂಬಿ ಇತ್ಯಾದಿ)ಹಣ್ಣು ಆಹಾರದಲ್ಲಿ ಇರಬೇಕು. ಸಾಧ್ಯವಾದಷ್ಟು ಹಸಿ ಎಲೆಗಳ ಚಹಾ ಕುಡಿಯಬೇಕು. ಆಹಾರದಲ್ಲಿ ಲೋಹದ ಪ್ರಮಾಣ ಸರಿಯಾಗಿ ಇರಬೇಕು.

vasu
ಕಾಲುಗಳಿಗೆ ಮೃದುವಾದ ಚಪ್ಪಲಿ ಧರಿಸಿ…

* ನನ್ನ ವಯಸ್ಸು 76. ಸುಮಾರು 15 ವರ್ಷಗಳಿಂದ ಮದುಮೇಹ ಮತ್ತು ಬಿ.ಪಿ ಇದೆ. ಇದಕ್ಕೆ ಮಾತ್ರೆಗಳನ್ನು ಪ್ರತಿದಿನ ತೆಗೆದುಕೊಳ್ಳುತ್ತಿದ್ದೇನೆ. ಇತ್ತೀಚೆಗೆ ಪಾದಗಳ ಮೇಲ್ಭಾಗ ಮತ್ತು ಅಂಗಾಲುಗಳು ಉರಿಯುತ್ತಿವೆ. ಮಾತ್ರೆಗಳನ್ನು ತೆಗೆದುಕೊಂಡರೂ ಸರಿಯಾಗಿಲ್ಲ. ನಿಮ್ಮ ಸಲಹೆ ತಿಳಿಸಿ.

| ಗೌಡರು, ಬೆಂಗಳೂರು

ಮಧುಮೇಹದ ಕಾರಣದಿಂದಾಗಿ ನರಗಳ ತೊಂದರೆ ಉಂಟಾಗಿ ಪಾದಗಳಲ್ಲಿ ಉರಿ ಕಾಣಿಸಿಕೊಂಡಿರಬಹುದು. ಮಧುಮೇಹದ ನಿಯಂತ್ರಣ ಬಹಳ ಮುಖ್ಯ. ಕಾಲುಗಳಿಗೆ ಚಂದನಾದಿ ತೈಲವನ್ನು ಹಚ್ಚಿ ಮಸಾಜ್ ಮಾಡಿಕೊಂಡು ಬೆಚ್ಚಗಿನ ನೀರಿನಲ್ಲಿ ಕಾಲುಗಳನ್ನಿಡಿ. ನೆಲ್ಲಿಕಾಯಿ ಪುಡಿ, ಗುಲಾಬಿದಳಗಳ ಪುಡಿ ಮತ್ತು ಮೆಂತ್ಯದ ಪುಡಿಯನ್ನು ಸಮಭಾಗ ತೆಗೆದುಕೊಂಡು ಮಜ್ಜಿಗೆಯಲ್ಲಿ ಬೆರೆಸಿ ಪೇಸ್ಟ್ ತಯಾರಿಸಿಕೊಂಡು ಉರಿಯಿರುವ ಭಾಗಕ್ಕೆ ಲೇಪಿಸಿಕೊಳ್ಳಿ. ಒಂದು ಗಂಟೆಯ ನಂತರ ತೊಳೆದುಕೊಳ್ಳಿ. ಪ್ರತಿದಿನ ಬೆಳಗ್ಗೆ ಖಾಲಿ ಹೊಟ್ಟೆಗೆ ಸೊಗದೆ ಬೇರಿನ ಕಷಾಯ ಕುಡಿಯಿರಿ. 10 ಗ್ರಾಂ. ಸೊಗದೆ ಬೇರನ್ನು ಕುಟ್ಟಿ ಒಂದು ಲೋಟ ನೀರಿಗೆ ಹಾಕಿ ಕುದಿಸಿ, ಅರ್ಧಲೋಟದಷ್ಟಾದಾಗ ಇಳಿಸಿ, ಆರಿಸಿ ಕುಡಿಯಿರಿ. ಅಲ್ಲದೆ ಕುಳಿತುಕೊಳ್ಳುವಾಗಲೆಲ್ಲ ಕಾಲುಗಳನ್ನು ಚಾಚಿ ಕುಳಿತುಕೊಳ್ಳಿ. ಮಲಗುವಾಗ ಕಾಲುಗಳನ್ನು ದಿಂಬಿನ ಮೇಲಿರಿಸಿ ಎತ್ತರಿಸಿಕೊಂಡು ಮಲಗಿ. ಕಾಲುಗಳಿಗೆ ಮೃದುವಾದ ಚಪ್ಪಲಿ ಧರಿಸಿ. ವಾಕ್​ವಾಡುವಾಗ ಕ್ಯಾನ್​ವಾಸ್ ಶೂ ಧರಿಸಿ.

* ನನ್ನ ವಯಸ್ಸು 67. ಮದುವೆಯಾಗಿ 45 ವರ್ಷವಾಗಿದೆ. ಸುಮಾರು 20 ವರ್ಷಗಳಿಂದ ಟೈಲರಿಂಗ್ ಮಾಡುತ್ತಿದ್ದೇನೆ. ಇದರಿಂದ ಕೀಲು ನೋವು, ಊತ ಇದೆ. ನಡೆದರೆ ಸುಸ್ತಾಗುತ್ತದೆ. ದಮ್ಮು ಬರುತ್ತದೆ. ಕೆಮ್ಮಿದರೆ ಕಾಲುಗಳಲ್ಲಿ ಕರೆಂಟ್ ಕೊಟ್ಟಂತೆ ಆಗುತ್ತದೆ. ಇದಕ್ಕೆ ಆಯುರ್ವೆದ ಔಷಧವನ್ನು ಸೇವಿಸಿದ್ದೇನೆ, ಮಸಾಜ್ ಮಾಡಿಸಿದ್ದೇನೆ. ಲೇಹ, ಪುಡಿ, ಎಣ್ಣೆ, ಲೇಪ ಇವು ಯಾವುದರಿಂದಲೂ ಪ್ರಯೋಜನವಾಗಿಲ್ಲ. ದಯವಿಟ್ಟು ಇದಕ್ಕೆ ಪರಿಹಾರ ತಿಳಿಸಿ.

| ಹೆಸರು ಬೇಡ, ಹಾಸನ.

ನಿಮ್ಮದು ಟೈಲರಿಂಗ್ ವೃತ್ತಿಯಾದುದರಿಂದ ಕೀಲುಗಳಲ್ಲಿ ಸವೆತ ಮತ್ತು ವಯಸ್ಸಿನ ಕಾರಣದಿಂದ ಆಸ್ಟಿಯೋಆರ್ಥರೈಟಸ್​ನಿಂದಾಗಿ ಕೀಲುನೋವು ಬರುತ್ತಿದೆ. ಅದಕ್ಕೆ ಕ್ಯಾಲ್ಷಿಯಂ ಮತ್ತು ರಂಜಕ ಇರುವ ಆಹಾರ ಸೇವನೆ ಬಹಳ ಮುಖ್ಯ. ದೀರ್ಘಕಾಲದ ಔಷಧ ಸೇವನೆಯೂ ಬೇಕು. ಜಾನುಬಸ್ತಿ ಎನ್ನುವ ಚಿಕಿತ್ಸೆಯನ್ನು ತೆಗೆದುಕೊಳ್ಳಿ. ಹಾಸನದಲ್ಲಿ ಆಯುರ್ವೆದ ಆಸ್ಪತ್ರೆಗೆ ಹೋಗಿ ಚಿಕಿತ್ಸೆ ಪಡೆಯಿರಿ. ಕೆಮ್ಮು ಮತ್ತು ದಮ್ಮಿಗೆ ತಾಲಿಸಾದಿ ಚೂರ್ಣವನ್ನು ಒಂದು ಚಮಚದಷ್ಟನ್ನು ಜೇನುತುಪ್ಪದೊಂದಿಗೆ ಬೆರೆಸಿ ದಿನಕ್ಕೆರಡು ಬಾರಿ ಖಾಲಿ ಹೊಟ್ಟೆಯಲ್ಲಿ ಸೇವಿಸಿ. ಪುಷ್ಕರಾಮೃತವನ್ನು ಮೂರುಚಮಚದಷ್ಟು ಊಟದ ನಂತರ ಸೇವಿಸಿ. ಆಹಾರದಲ್ಲಿ ಹೆಚ್ಚು ಖಾರ, ಎಣ್ಣೆ, ಹುಳಿ ಪದಾರ್ಥಗಳನ್ನು ಸೇವಿಸಬೇಡಿ. ಬಿಸಿನೀರನ್ನು ಕುಡಿಯಿರಿ. ಬಿಸಿಯಾದ ಆಹಾರ ಸೇವಿಸಿ. ರಾತ್ರಿಹೊತ್ತು ಮೊಸರು, ಮಜ್ಜಿಗೆ ಬೇಡ. ಮನಸ್ಸಿಗೆ ಒತ್ತಡ ಮಾಡಿಕೊಳ್ಳಬೇಡಿ. ಕೀಲುನೋವಿಗೆ ಮಹಾರಸ್ನಾದಿ ಕಷಾಯ ಸೇವಿಸಿ. ಎಳ್ಳೆಣ್ಣೆ ಮತ್ತು ಸಾಸಿವೆ ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ಮಸಾಜ್ ಮಾಡಿ ನಂತರ ಶಾಖ ತೆಗೆದುಕೊಳ್ಳಿ.

* ನನ್ನ ಪತ್ನಿಗೆ ಸೋರಿಯಾಸಿಸ್ ರೋಗ ಕಳೆದ 15-20 ವರ್ಷಗಳಿಂದ ಗಂಟುಬಿದ್ದಿದೆ. ಹಲವಾರು ವೈದ್ಯರಿಗೆ ತೋರಿಸಿದರೂ ತಾತ್ಕಾಲಿಕ ಗುಣವಾದಂತಾಗಿ ಮತ್ತೆ ಪ್ರಾರಂಭವಾಗುತ್ತದೆ. ಅದಕ್ಕೆ ಶಾಶ್ವತ ಗುಣವಾಗಬಲ್ಲ ಔಷಧೋಪಚಾರ ಇದ್ದರೆ ತಿಳಿಸಿ.

| ಹೆಸರು ಬೇಡ, ಹುಬ್ಬಳ್ಳಿ

ಸೋರಿಯಾಸಿಸ್ ಒಂದು ಆಟೋ ಇಮ್ಯುನ್ ಡಿಸಾರ್ಡರ್. ಚರ್ಮದ ಜೀವಕೋಶಗಳು ಬಹುಬೇಗ ಬೆಳೆದುಬಿಡುತ್ತವೆ. ಮಾನಸಿಕ ಒತ್ತಡದಿಂದಲೂ ಹೆಚ್ಚಾಗುತ್ತದೆ. ಆರಂಭದಲ್ಲಿ ಸ್ವಲ್ಪ ಕಾಣಿಸಿಕೊಂಡಾಗಲೇ ಸರಿಯಾದ ಚಿಕಿತ್ಸೆ ದೊರಕಿದರೆ ಗುಣವಾಗುತ್ತದೆ. ಆದರೆ ಬಹುತೇಕರಲ್ಲಿ ಮರುಕಳಿಸುತ್ತಿರುತ್ತದೆ. ಚಳಿಗಾಲ, ಮಳೆಗಾಲಗಳಲ್ಲಿಯೂ ಹೆಚ್ಚು ಭಾದಿಸುತ್ತದೆ. ವರ್ಷಕ್ಕೊಮ್ಮೆ ಪಂಚಕರ್ಮ ಚಿಕಿತ್ಸೆ ತೆಗೆದುಕೊಳ್ಳುವುದು ಉತ್ತಮ. ವಿರೇಚನ ಮತ್ತು ಚಕ್ರಧಾರಾ ಚಿಕಿತ್ಸೆಯಿಂದ ಬಹಳ ಬೇಗ ನಿಯಂತ್ರಣಕ್ಕೆ ಬರುತ್ತದೆ. ದಿನಕ್ಕೆ ಮೂರ್ನಾಲ್ಕು ಬಾರಿ ಮಧುಯಷ್ಟಿ ತೈಲ ಇಲ್ಲವೇ ಕೊಬ್ಬರಿ ಎಣ್ಣೆಯನ್ನು ಸವರಿಕೊಳ್ಳುತ್ತಿರಬೇಕು. ಚರ್ಮ ಒಣಗಲು ಬಿಡಬಾರದು. ಕೊಬ್ಬರಿಎಣ್ಣೆಯುಕ್ತ ಸಾಬೂನನ್ನು ಬಳಸಬೇಕು. ಸ್ನಾನಕ್ಕೆ ಹೆಚ್ಚು ಬಿಸಿನೀರಿನ ಬಳಕೆ ಬೇಡ. ನೆಲ್ಲಿಕಾಯಿಯ ಕಷಾಯ ತಯಾರಿಸಿ, ಆರಿಸಿ ಮಜ್ಜಿಗೆ ಬೆರೆಸಿ ಸ್ನಾನದ ಸಮಯದಲ್ಲಿ ಸೋರಿಯಾಸಿಸ್ ಇರುವೆಡೆ ತೊಳೆದುಕೊಳ್ಳಬೇಕು. ಆಹಾರದಲ್ಲಿಯೂ ನೆಲ್ಲಿಕಾಯಿಯ ಬಳಕೆ ಹೆಚ್ಚಾಗಿರಲಿ. ಮಾನಸಿಕ ಒತ್ತಡ ತಗ್ಗಿಸಿಕೊಳ್ಳಲು ಸಾಹಿತ್ಯ, ಸಂಗೀತ, ಗಿಡ ಬೆಳೆಸುವುದು… ಹೀಗೆ ಅವರಿಗಿಷ್ಟವಾದ ಯಾವುದಾದರೂ ಹವ್ಯಾಸಗಳಲ್ಲಿ ತೊಡಗಿಸಿಕೊಳ್ಳಲು ತಿಳಿಸಿ. ದಿನಕ್ಕೆ ಮೂರು ಲೀ. ನೀರು ಕುಡಿಯಬೇಕು. ಪ್ರತಿನಿತ್ಯ ಒಂದು ಗಂಟೆ ಕಾಲ ವಾಕಿಂಗ್, ವ್ಯಾಯಾಮ ಇಲ್ಲವೇ ಯೋಗ ಮಾಡಲು ತಿಳಿಸಿ.

Write A Comment