ಅಂತರಾಷ್ಟ್ರೀಯ

ಪ್ರೇಮಿಗಳಿಗೆ ‘ಮುತ್ತು’ ನೀಡುವುದೇ ಇಲ್ಲಿ ಹಬ್ಬ !!

Pinterest LinkedIn Tumblr

muttuಯುದ್ದದಲ್ಲಿ ಸೋತವರಿಗೆ ದುಃಖ ಸಾಮಾನ್ಯವಾದರೆ ಗೆದ್ದವರಿಗೆ ಅದರ ಸಂಭ್ರಮ ವರ್ಣಿಸಲು ಸಾಧ್ಯವಿಲ್ಲ. ಆದರೆ ಎರಡನೇ ಮಹಾಯುದ್ದ ಗೆದ್ದ ಸಂತಸದಲ್ಲಿ  ಅಮೆರಿಕಾ ನಾಗರೀಕರು ಕಿಸ್ಸಿಂಗ್ ಫೆಸ್ಟಿವಲ್ ಆಚರಿಸಿದರು. ಅರೆ, ಇದೇನು ಅಂತೀರಾ..? ಈ ಸ್ಟೋರಿ ಓದಿ.

ಹೌದು. 70 ವರ್ಷಗಳ ಹಿಂದೆ ಹಿರೊಷಿಮಾ, ನಾಗಸಾಕಿ ದುರಂತದಲ್ಲಿ ಮಡಿದವರಿಗೆ ಜಪಾನೀಯರು ಶ್ರದ್ದಾಂಜಲಿ ಅರ್ಪಿಸಿದರೆ ಅಮೇರಿಕಾದ ನೂರಾರು ಜೋಡಿಗಳು ಬೀದಿಯಲ್ಲಿ ತಮ್ಮ ಪ್ರೇಮಿಗಳಿಗೆ ಮುತ್ತಿಕ್ಕುವ ಮೂಲಕ ಯುದ್ದ ಗೆದ್ದ ನೆನಪನ್ನು ಸಂಭ್ರಮಿಸಿದರು.

ಎರಡನೇ ಮಹಾಯುದ್ದದಲ್ಲಿ ಅಮೆರಿಕಾ ಜಯ ಸಾಧಿಸುತ್ತಿದ್ದಂತೆ ಓರ್ವ ನಾವಿಕ ಸಂತಸದಿಂದ ರಸ್ತೆಯಲ್ಲಿದ್ದ ಒಬ್ಬ ಯುವತಿಯನ್ನು ಚುಂಬಿಸಿದನಂತೆ. ಈ ದೃಶ್ಯವನ್ನು ಮಾಧ್ಯಮದ ಫೋಟೋ ಗ್ರಾಫರ್ ಒಬ್ಬ ಸೆರೆ ಹಿಡಿದನಂತೆ. ಇದೇ ಮುಂದೆ V – J Day in Times Square ಎಂದು ನಡೆದುಕೊಂಡು ಬಂದಿದ್ದು ಇದೇ ಹಿನ್ನೆಲೆಯಲ್ಲಿ ಶುಕ್ರವಾರ ಈ ಜೋಡಿಗಳು ಮುತ್ತಿನ ಮತ್ತಿನಲ್ಲಿ ತೇಲಾಡಿದರು.

Write A Comment