ಜಗತ್ತಿನಾದ್ಯಂತ ರಕ್ತದ ಹೊಳೆ ಹರಿಸುತ್ತಿರುವ ಇಸಿಸ್ ಉಗ್ರಸಂಘಟನೆಯ ಹಿಂದೆ ವಿಶ್ವದ ದೊಡ್ಡಣ್ಣ ಅಮೇರಿಕಾದ ಕೈವಾಡ ಇರುವ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಹೌದು. ಈ ಹಿಂದೆ ಒಸಾಮಾ ಬಿನ್ ಲಾಡೆನ್ ಹಾಗೂ ಅಲ್‌ಖೈದಾವನ್ನು ಸಾಕಿ-ಸಲಹಿ, ತಿರುಗಿಬಿದ್ದ ಸಮಯದಲ್ಲಿ ಅಲ್‌ಖೈದಾವನ್ನು ಮಟ್ಟ ಹಾಕಲು ಮುಂದಾಗಿದ್ದ ಅಮೇರಿಕಾ ಇದೀಗ ಇಸಿಸ್ ಉಗ್ರ ಸಂಘಟನೆಯನ್ನು ಹುಟ್ಟು ಹಾಕಿ ಸಿರಿಯಾ ಸರ್ಕಾರವನ್ನು ಪತನಗೊಳಿಸಲು ಮುಂದಾಗಿತ್ತು ಎನ್ನಲಾಗಿದೆ.
ಇದಕ್ಕೆ ಪುಷ್ಟಿ ನೀಡುವಂತೆ ಅಮೆರಿಕದ ರಕ್ಷಣಾ ಗುಪ್ತಚರ ಸಂಸ್ಥೆಯ ರಹಸ್ಯ ದಾಖಲೆಗಳು ಬಹಿರಂಗವಾಗಿದ್ದು, ಅದರಲ್ಲಿ ರುವ ಮಾಹಿತಿ ಪ್ರಕಾರ ಅಮೆರಿಕ, ಟರ್ಕಿ ಹಾಗೂ ಅರಬ್ ರಾಷ್ಟ್ರಗಳ ಕೈವಾಡವಿದೆ ಎಂಬ ಅನುಮಾನವನ್ನು ಸಿರಿಯಾದ ಮಾಜಿ ಅಧ್ಯಕ್ಷ ಬಶರ್ ಅಲ್ ಅಸಾದ್ ಅವರಿಗೆ ಸಲಹೆಗಾರ್ತಿಯಾಗಿದ್ದ ಬೌಥಾ ಯಿನಾ ಶಾಬನ್ ಅವರು 2012ರಲ್ಲೇ ತಿಳಿಸಿದ್ದರು ಎಂಬ ಅಂಶವೂ ಬೆಳಕಿಗೆ ಬಂದಿದೆ.