ಇರಾಕ್‌ನಲ್ಲಿ ಮತ್ತೆ ಉಗ್ರರು ಅಟ್ಟಹಾಸ ಪ್ರದರ್ಶಿಸಿದ್ದು ಇಲ್ಲಿನ ಮಾರುಕಟ್ಟೆಯೊಂದರಲ್ಲಿ ಗುರುವಾರ ಬೆಳಗ್ಗೆ ಟ್ರಕ್ ಒಂದು ಸ್ಪೋಟಗೊಂಡು 60 ಕ್ಕೂ ಹೆಚ್ಚು ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ವರದಿಯಾಗಿದೆ.
ಇಲ್ಲಿನ ಸದ್ರ್ ಎಂಬಲ್ಲಿ ಈ ಘಟನೆ ನಡೆದಿದ್ದು ಉಗ್ರರು ಟ್ರಕ್ ಒಂದರಲ್ಲಿ ಭಾರೀ ಸ್ಪೋಟಕಗಳನ್ನುತುಂಬಿಸಿ ಜನಜಂಗುಳಿಯಿಂದ ಕೂಡಿರುವ ಮಾರುಕಟ್ಟೆಯಲ್ಲಿ ಸ್ಪೋಟಿಸಿ 60 ಕ್ಕೂ ಹೆಚ್ಚು ಮಂದಿಯನ್ನು ಹತ್ಯೆ ಮಾಡಿದ್ದು ಘಟನೆಯಲ್ಲಿ 200 ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಿ ಚಿಕಿತ್ಸೆ ನೀಡಲಾಗುತ್ತಿದ್ದು ಇಸಿಸ್ ಉಗ್ರರ ಕೈವಾಡ ಇರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.