ಬ್ರಿಟನ್, ಆ.13: ಭಾರತದ ಸ್ವಾತಂತ್ರ್ಯೋತ್ಸವ ಸಂಭ್ರಮಾಚರಣೆ ಅಂಗವಾಗಿ ಸಂಗೀತ ಮಾಂತ್ರಿಕ ಎ.ಆರ್.ರೆಹಮಾನ್ ಅವರು ಇಲ್ಲಿ ನೆಲೆಸಿರುವ ಭಾರತೀಯ ಮೂಲದವರಿಗಾಗಿ ವಿಶೇಷ ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಡಲಿದ್ದಾರೆ.
ಇದೇ ಆ.15 ರಂದು ಲಂಡನ್‌ನ 02 ಹರಿನಾದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಸಂಗೀತ ದಿಗ್ಗಜರಾದ ಜಾವೀದ್ ಆಲಿ, ಕಾರ್ತಿಕ್, ನೀತಿ ಮೋಹನ್ ಸೇರಿದಂತೆ ಹಲವರು ಪಾಲ್ಗೊಳ್ಳುತ್ತಿದ್ದು, ನಾನೂ ಕೂಡ ಸಂಗೀತದ ರಸದೌತಣ ಉಣಬಡಿಸುತ್ತಿದ್ದು, ಇದಕ್ಕಾಗಿ ನಾನು ಕಾತುರದಿಂದ ಕಾಯುತ್ತಿದ್ದೇನೆ ಎಂದು ರೆಹಮಾನ್ ಸಾಮಾಜಿಕ ತಾಣ ಟ್ವೀಟರ್‌ನಲ್ಲಿ ಸಂತಸ ಹಂಚಿಕೊಂಡಿದ್ದಾರೆ.
ಐದು ವರ್ಷಗಳ ಬಳಿಕ ಲಂಡನ್‌ನಲ್ಲಿ ಸಂಗೀತ ಕಾರ್ಯಕ್ರಮವೊಂದನ್ನು ನೀಡುತ್ತಿದ್ದು, ಇಲ್ಲಿರುವ ಎಲ್ಲಾ ಭಾರತೀಯರನ್ನು ನೋಡುವ ಸುಯೋಗ ಈ ಸ್ವಾತಂತ್ರ್ಯ ದಿನದಂದೇ ಲಭಿಸಿರುವುದು ನನ್ನ ಖುಷಿಯನ್ನು ಇಮ್ಮಡಿಗೊಳಿಸಿದೆ ಎಂದು ಹೇಳಿದ್ದಾರೆ.