ಅಂತರಾಷ್ಟ್ರೀಯ

ಮಂಗಳನ ಅಂಗಳದಲ್ಲಿತ್ತಂತೆ ಸರೋವರ !

Pinterest LinkedIn Tumblr

mangalaವಿಜ್ಞಾನಿಗಳ ಕುತೂಹಲ ಕೆರಳಿಸಿರುವ ಮಂಗಳ ಗ್ರಹದಲ್ಲಿ ಸರೋವರದ ಕುರುಹು ಪತ್ತೆಯಾಗಿದ್ದು ಮಂಗಳನಲ್ಲಿ ನೀರು ಇರುವುದರ ಜತೆಗೆ ಜೀವಿಗಳೂ ಸಹ ವಾಸವಾಗಿದ್ದವು ಎಂಬ ಅಂಶಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

ಅಮೆರಿಕದ ಬೌಲ್ಡೆರ್‌ನಲ್ಲಿರುವ ಯೂನಿವರ್ಸಿಟಿ ಆಫ್‌ ಕೊಲೊರಾಡೊದ ಸಂಶೋಧಕರು ಮಂಗಳನ ಮೇಲಿರುವ ಸುಮಾರು 18 ಚದರ ಮೈಲಿ ವಿಸ್ತೀರ್ಣದ  ಉಪ್ಪಿನ ಪದರಗಳ ಅಧ್ಯಯನ ನಡೆಸಿದಾಗ ಈ ಅಂಶ ಗಮನಕ್ಕೆ ಬಂದಿದೆ ಎನ್ನಲಾಗುತ್ತಿದ್ದು ಈ ಸರೋವರದಲ್ಲಿ ಸುದೀರ್ಘ ವರ್ಷಗಳ ಕಾಲ ನೀರು ಇದ್ದಿರಬಹುದು ನೀರು ಆವಿಯಾಗಿ ಆ ಸ್ಥಳದಲ್ಲಿ ಉಪ್ಪಿನ ಪದರಗಳು ನಿರ್ಮಾಣವಾಗಿರುವ ಸಾಧ್ಯತೆಯಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಅಪಾರ್ಚುನಿಟಿ ರೋವರ್‌ ಮಂಗಳನಲ್ಲಿ ಇಳಿದಿರುವ ಸ್ಥಳದ ಬಳಿಯೇ ಈ ಸರೋವರದ ಕುರುಹು ಇದ್ದು ‘ಅಪಾರ್ಚುನಿಟಿ’ ರವಾನಿಸಿರುವ ಮಾಹಿತಿಗಳನ್ನು ಆಧರಿಸಿ ಸಂಶೋಧಕರು ಈ ಅಧ್ಯಯನ ನಡೆಸಿದ್ದು ಈ ಸರೋವರ ಸುಮಾರು 360 ಕೋಟಿ  ವರ್ಷಗಳಷ್ಟು ಹಿಂದಿನದ್ದಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ.

Write A Comment