ಬೀಜಿಂಗ್: ಅಶ್ಲೀಲ ವೀಡಿಯೋಗಳ ವಿರುದ್ಧ ಚೀನಾ ಸರ್ಕಾರ ಸಮರ ಸಾರಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಹವ್ಯಾಸಿ ಸೆಕ್ಸ್ ವೀಡಿಯೋಗಳನ್ನು ತೆಗೆದುಹಾಕಲು ಸರ್ಕಾರ ನಿರ್ಧರಿಸಿದೆ.
ಸ್ಮಾರ್ಟ್ ಫೋನ್‍ಗಳ ಈ ಕಾಲದಲ್ಲಿ ಸೆಕ್ಸ್ ವೀಡಿಯೋಗಳನ್ನು ಸಿದ್ಧಪಡಿಸಿ ಆನ್‍ಲೈನ್‍ಗೆ ಅಪ್‍ಲೋಡ್ ಮಾಡುವುದು ಸುಲಭವಾಗಿಬಿಟ್ಟಿದೆ. ಈ ಹಿನ್ನೆಲೆಯಲ್ಲಿ ಅಂಥ ವೀಡಿಯೋಗಳು ವೆಬ್ ಸೈಟ್‍ಗೆ ಅಪ್‍ಲೋಡ್ ಆಗುವುದನ್ನು ತಡೆಯುವ ಅಗತ್ಯವಿದೆ ಎಂದು ಅಲ್ಲಿನ ಸರ್ಕಾರ ಅಭಿಪ್ರಾಯಪಟ್ಟಿದೆ.
ಬಟ್ಟೆ ಅಂಗಡಿಯೊಂದರ ಟ್ರಯಲ್ ರೂಮ್ ನಲ್ಲಿ ತೆಗೆದಿದ್ದ ಸೆಕ್ಸ್ ವೀಡಿಯೊವೊಂದು ಚೀನಾದಲ್ಲಿ ಇತ್ತೀಚೆಗೆ ಸಾಕಷ್ಟು ಚರ್ಚೆಹುಟ್ಟುಹಾಕಿತ್ತು.