ಮೇನಲ್ಲಿ ಪೂರ್ವ ಸೌದಿ ಅರೇಬಿಯಾದಲ್ಲಿ ನಡೆದ ಆತ್ಮಹತ್ಯಾ ಬಾಂಬ್ ದಾಳಿ
ರಿಯಾದ್: ಮಸೀದಿಯೊಂದರ ಮೇಲೆ ಆತ್ಮಹತ್ಯಾ ಮಾನವ ಬಾಂಬ್ ದಾಳಿ ನಡೆದು ಸೌದಿ ಅರೇಬಿಯಾದಲ್ಲಿ ಕನಿಷ್ಠ ೧೭ ಜನ ಪೊಲೀಸರು ಮೃತಪಟ್ಟಿದ್ದಾರೆ ಎಂದು ಆಲ್ ಅರೇಬಿಯಾ ವರದಿ ಮಾಡಿದೆ.
ಆಸಿರ್ ಪ್ರಾಂತ್ಯದ ರಾಜಧಾನಿ ಅಭಾದಲ್ಲಿ ಈ ದುರ್ಘಟನೆ ಜರುಗಿದೆ.
ಸೌದಿ ಅರೇಬಿಯಾದಲ್ಲಿ ಮಸೀದಿಯ ಮೇಲೆ ದಾಳಿ ನಡೆದಿರುವುದ ಇದೇ ಮೊದಲೇನಲ್ಲ.
ಮೇನಲ್ಲಿ ಪೂರ್ವ ಸೌದಿ ಅರೇಬಿಯಾದ ಮಸೀದಿಯೊಂದರ ಮೇಲೆ ಪ್ರಾಥನೆ ಜರುಗುವಾಗ ನಡೆದ ಆತ್ಮಹತ್ಯಾ ಬಾಂಬ್ ಸ್ಫೋಟಕ್ಕೆ ೨೦ ಜನ ಸಾವನ್ನಪ್ಪಿದ್ದರು. ಇದಕ್ಕೆ ಇಸ್ಲಾಮಿಕ್ ಸ್ಟೇಟ್ ಹೊಣೆ ಹೊತ್ತಿತ್ತು.