ಇಸ್ಲಾಮಾಬಾದ್,ಆ.4- ಅಪರಾಧವೆಸಗಿದಾಗ ಅಪ್ರಾಪ್ತನಾಗಿದ್ದ ಎಂಬ ಕಾರಣಕ್ಕೆ ಮಾನವ ಹಕ್ಕುಗಳ ಸಂಸ್ಥೆಯ ವಿರೋಧದ ಹಿನ್ನೆಲೆಯಲ್ಲಿ 4 ಬಾರಿ ಮರಣ ದಂಡನೆಯಿಂದ ತಪ್ಪಿಸಿಕೊಂಡಿದ್ದ ಹಂತಕನನ್ನು ಪಾಕಿಸ್ತಾನ ಸರ್ಕಾರ ಕೊನೆಗೂ ಇಂದು ಗಲ್ಲಿಗೇರಿಸಿದೆ.
ಶಫ್ಕರ್ ಹುಸೇನ್ 2004ರಲ್ಲಿ 7 ವರ್ಷದ ಬಾಲಕನೊಬ್ಬನನ್ನು ಅಪಹರಿಸಿ ಹತ್ಯೆ ಮಾಡಿದ್ದ. ಆದರೆ ಅವನು ಬಾಲಾಪರಾದಿಯಾಗಿರುವುದರಿಂದ ಅವನನ್ನು ಗಲ್ಲಿಗೆ ಹಾಕಬಾರದು ಎಂಬ ಒತ್ತಾಯದ ಹಿನ್ನೆಲೆಯಲ್ಲಿ 2014ರಿಂದೀಚೆಗೆ
ಗಲ್ಲುಶಿಕ್ಷೆ ನಾಲ್ಕು ಬಾರಿ ತಪ್ಪಿತ್ತು. ಆದರೆ ಆರೋಪಿಯ ನಿಜವಾದ ವಯಸ್ಸಿನ ಬಗ್ಗೆ ತನಿಖೆ ನಡೆಸಲು ಸರ್ಕಾರ ಸಮಿತಿ ರಚಿಸಿತ್ತು. ವಿಚಾರಣೆ ನಂತರ ಅವನ ವಯಸ್ಸು 23 ಎಂಬುದು ಸ್ಪಷ್ಟವಾಯಿತು. ಹುಸೇನ್‌ನನ್ನು ಇಂದು ಬೆಳಗ್ಗೆ ಗಲ್ಲಿಗೇರಿಸಲಾಯಿತು. ಪಾಕಿಸ್ತಾನ ಸರ್ಕಾರವು, ಪೇಷಾವರ ಸೈನಿಕ ಶಾಲೆ ಮೇಲಿನ ದಾಳಿ ಹಿನ್ನೆಲೆಯಲ್ಲಿ 2014ರಲ್ಲಿ ಗಲ್ಲುಶಿಕ್ಷೆ ಮೇಲಿನ ನಿಷೇಧವನ್ನು ವಾಪಸ್ ಪಡೆದಿತ್ತು. ನಿಷೇಧ ತೆರವಿನ ನಂತರ ಪಾಕಿಸ್ತಾನ 180 ಮಂದಿಯನ್ನು ಗಲ್ಲಿಗೆ ಹಾಕಿದೆ.