ಅಂತರಾಷ್ಟ್ರೀಯ

ಸಾಕ್ಷಿ ನಾಶಕ್ಕಾಗಿ ಈತ ಮಾಡಿದ್ದೇನು ಗೊತ್ತಾ ..?

Pinterest LinkedIn Tumblr

beraluಕಳ್ಳರು, ಕೊಲೆಗಾರರು ಸೇರಿದಂತೆ ಅಪರಾಧ ಕೃತ್ಯಗಳಲ್ಲಿ ತೊಡಗಿಸಿಕೊಂಡವರು ಸಾಕ್ಷಿ ನಾಶಕ್ಕಾಗಿ ಪ್ರಯತ್ನಿಸುವುದು ಮಾಮೂಲು. ಆದರೆ ಇಲ್ಲೊಬ್ಬ ಮಹಾನ್ ಕಳ್ಳ ಸಾಕ್ಷಿ ನಾಶಕ್ಕಾಗಿ ಹೊಸ ಪ್ರಯೋಗ ಮಾಡುವ ಮೂಲಕ ಪೊಲೀಸರನ್ನೇ ಬೆಚ್ಚಿ ಬೀಳಿಸಿದ್ದಾನೆ.

ಹೌದು. ಪ್ಲೋರಿಡಾದಲ್ಲಿ  ವರ್ಷದ ಕೆಂಜೋ ರೋಬರ್ಟ್ಸ್ ಎಂಬಾತ ಮರ್ಸಿಡಸ್  ಕಾರೊಂದನ್ನು ಕದ್ದು ಪೊಲೀಸರ ಕೈಯ್ಯಲ್ಲಿ ಸಿಕ್ಕಿ ಬಿದ್ದಿದ್ದಾನೆ. ಈ ಹಿಂದೆ ಹಲವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಆರೋಪವೂ ಇವನ ಮೀಲಿದ್ದರಿಂದ ಹೆದರಿದ ಈತ ಪೊಲೀಸರು ತನ್ನ ಕೈ ಬೆರಳಿನ ಸಹಾಯದಿಂದ ಗುರುತು ಪತ್ತೆ ಹಚ್ಚಬಹುದು ಎಂಬ ಕಾರಣಕ್ಕೆ ಈತ ತನ್ನ ಕೈ ಬೆರಳಿನ ಚರ್ಮವನ್ನೇ ಕಚ್ಚಿ ತಿಂದಿದ್ದಾನೆ.

ಆದರೆ ಈತನ ಈ ಕೃತ್ಯ ಠಾಣೆಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಪತ್ತೆಯಾಗಿದ್ದು ಇದನ್ನು ಕಂಡ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ. ಅಷ್ಟೇ ಅಲ್ಲ, ಸ್ಕ್ಯಾನಿಂಗ್ ನಡೆಸಿದಾಗ ಈ ಹಿಂದೆ ಅಪರಾಧ ಕೃತ್ಯ ಎಸಗಿರುವುದೂ ಸಹ ಈತನೇ ಎಂಬುದು ತಿಳಿದು ಬಂದಿದೆಯಂತೆ.

Write A Comment