ಅಂತರಾಷ್ಟ್ರೀಯ

ಬೆಕ್ಕಿನ ಬಳಿಕ ಇದೀಗ ನಾಯಿಯನ್ನು ಮದುವೆಯಾಗಲು ಮುಂದಾದ ಮಹಿಳೆಯ ಕಥೆ ಇಲ್ಲಿದೆ ಓದಿ…

Pinterest LinkedIn Tumblr

a1

ಆಂಸ್ಟರ್ಡ್ಯಾಮ್: ಪ್ರಾಣಿಗಳನ್ನು ಬಾಳಸಂಗಾತಿಗಿಂತ ಹೆಚ್ಚಾಗಿ ಪ್ರೀತಿಸುವವರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬ ಮಹಿಳೆ ಪ್ರಾಣಿಗಳನ್ನೇ ತನ್ನ ಬಾಳ ಸಂಗಾತಿಯನ್ನಾಗಿ ಮಾಡಿಕೊಂಡಿದ್ದಾಳೆ.

a

ಹೌದು ಹಾಲೆಂಡ್‍ನ ಡೊಮಿನಿಕ್ ಲೆಸ್‍ಬಿರೆಲ್ ಎಂಬ 41 ವರ್ಷದ ಮಹಿಳೆ ಈ ಹಿಂದೆ ತಾನು ಪ್ರೀತಿಸುತ್ತಿದ್ದ ಡೋರಕ್ ಎನ್ನುವ ಬೆಕ್ಕನ್ನು 16 ವರ್ಷದಿಂದ ಗಂಡನೆಂದು ಸ್ವೀಕರಿಸಿದ್ದಳು. ಆದರೆ ಕಳೆದ ವಾರ ಕಿಡ್ನಿ ವೈಫಲ್ಯದಿಂದ ಬೆಕ್ಕು ಸಾವನ್ನಪ್ಪಿದೆ. ಹೀಗಾಗಿ ಈಗ ಈಕೆ ತಾನು ಇಷ್ಟಪಡುವ ಟ್ರಾವಿಸ್ ಎಂಬ ನಾಯಿಯನ್ನೇ ಮದುವೆಯಾಗಲು ತೀರ್ಮಾನಿಸಿದ್ದಾಳೆ.

ಲೆಸ್‍ಬಿರೆಲ್ ಈಕೆ ಹಾಲೆಂಡ್‍ನಲ್ಲಿ www.marryyourpet.com ಎಂಬ ವೆಬ್‍ಸೈಟ್ 2003 ರಿಂದ ನಡೆಸುತ್ತಿದ್ದಾಳೆ. ಮನುಷ್ಯನಿಗಿಂತ ಪ್ರಾಣಿಗಳನ್ನೇ ಮದುವೆಯಾಗುವುದು ಸೂಕ್ತ ಎನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿ ಈಕೆ 2ನೇ ಬಾರಿಗೂ ಪ್ರಾಣಿಯನ್ನೇ ಮದುವೆಯಾಗುವ ತೀರ್ಮಾನ ತೆಗೆದುಕೊಂಡಿದ್ದಾಳೆ.

Write A Comment