ಅಂತರಾಷ್ಟ್ರೀಯ

2016ರ ವೇಳೆಗೆ ಸಿಮ್ ಕಾರ್ಡ್ ಜಾಗಕ್ಕೆ ಇ-ಸಿಮ್

Pinterest LinkedIn Tumblr

e-simಲಂಡನ್: ಪೇಜರ್, ಕಾರ್ ಫೋನ್ ನಂತೆಯೇ ಸಿಮ್ ಕಾರ್ಡ್ ಕೂಡ ಶೀಘ್ರದಲ್ಲೇ ಇತಿಹಾಸದ ಪುಟ ಸೇರಲಿದೆ.

ಸಿಮ್ ಕಾರ್ಡ್‍ಗಳ ಜಾಗದಲ್ಲಿ ಇ-ಸಿಮ್ ಗಳನ್ನು ತರಲು ಆ್ಯಪಲ್ ಮತ್ತು ಸ್ಯಾಮ್ ಸಂಗ್ ಚಿಂತನೆ ನಡೆಸುತ್ತಿದೆ. ಮೊಬೈಲ್ ಟೆಲಿಕಾಂ ಇಂಡಸ್ಟ್ರಿಯನ್ನು ಪ್ರತಿನಿಧಿಸುತ್ತಿರುವ ಜಿಎಸ್‍ಎಂಎ ಜತೆ ಈ ಎರಡೂ ಮೊಬೈಲ್ ಸಂಸ್ಥೆಗಳು ಈ ಬಗ್ಗೆ ಮಾತುಕತೆ  ನಡೆಸುತ್ತಿದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

ಎಲೆಕ್ಟ್ರಾನಿಕ್ ಸಿಮ್ ಕಾರ್ಡ್‍ಗಳ ಬಳಕೆಯು ಬಹಳ ಸರಳವಾಗಿದ್ದು, ಗ್ರಾಹಕರು ಸುಲಭವಾಗಿ ಮೊಬೈಲ್ ನೆಟ್ ವರ್ಕ್‍ಗಳನ್ನು ಅದಲು ಬದಲು ಮಾಡಬಹುದು. ಐಪ್ಯಾಡ್ ಏರ್ 2 ಜೊತೆಗೆ ಬಿಡುಗಡೆಯಾದ ಆ್ಯಪಲ್ ಸಿಮ್ ನಲ್ಲಿ ಬಳಸಲಾದ ತಂತ್ರಜ್ಞಾನದ ಮಾದರಿಯನ್ನೇ ಇ-ಸಿಮ್ ನಲ್ಲೂ ಬಳಸಲಾಗುತ್ತದೆ.

ಹೀಗಾಗಿ ಗ್ರಾಹಕರು ಡಾಟಾ ನೆಟ್‍ವರ್ಕ್ ಅನ್ನು ಸುಲಭವಾಗಿ ವಿನಿಮಯ ಮಾಡಿಕೊಳ್ಳ ಬಹುದು. ಇ-ಸಿಮ್ ಅನ್ನು ಸ್ಮಾರ್ಟ್ ಫೋನ್ ಅಥವಾ ಟ್ಯಾಬ್ಲೆಟ್‍ನಲ್ಲೂ ಬಳಸಬಹುದಾಗಿದೆ. ಮುಂದಿನ ತಲೆಮಾರಿನ ಎಲ್ಲ  ಫೋನುಗಳೂ ಇ-ಸಿಮ್ಅನ್ನು ಒಳಗೊಂಡಿರಲಿದೆ. 2016ರ ವೇಳೆಗೆ ಹೊಸ ಸಿಮ್ ಚಾಲ್ತಿಗೆ ಬರಬಹುದು ಎಂದು ಜಿಎಸ್‍ಎಂಎ ತಿಳಿಸಿದೆ.

Write A Comment