ಅಂತರಾಷ್ಟ್ರೀಯ

ಎರಡೇ ಸಾವಿರಕ್ಕೆ ಕಂಪ್ಯೂಟರ್ !

Pinterest LinkedIn Tumblr

computerಅಗ್ಗದ ಬೆಲೆಯಲ್ಲಿ ವಸ್ತುಗಳ ಮಾರಾಟಕ್ಕೆ ಪ್ರಖ್ಯಾತಿ ಪಡೆದಿರುವ ಚೀನಾ ಇದೀಗ ಕೇವಲ ಎರಡು ಸಾವಿರಕ್ಕೆ ಕಂಪ್ಯೂಟರ್ ಅನ್ನು ಮಾರುಕಟ್ಟೆಗೆ ಬಿಡಲು ಮುಂದಾಗಿದೆ.

ಹೌದು. ಬೀಜಿಂಗ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ಜಿದೇ ಟೆಕ್ ಎಂಬ ಕಂಪನಿ ರೀಮಿಕ್ಸ್ ಮಿನಿ ಎನ್ನುವ ಆಂಡ್ರಾಯ್ಡ್ ಕಂಪ್ಯೂಟರ್ ಅನ್ನು ಅಭಿವೃದ್ಧಿ ಪಡಿಸುತ್ತಿದ್ದು ಕಡಿಮೆ ವಿದ್ಯುತ್ ಬಳಸಿಕೊಂಡು ಹೆಚ್ಚು ಶಕ್ತಿಶಾಲಿಯಾಗಿ ಕಾರ್ಯ ನಿರ್ವಹಿಸುವ ಈ ಆಂಡ್ರಾಯ್ಡ್ ಪಿಸಿಯನ್ನು ಎರಡು ಸಾವಿರಕ್ಕೆ ಜನರಿಗೆ ತಲುಪಿಸಲಿದೆ.

ಈ ರೀಮಿಕ್ಸ್ ಮಿನಿ ಕಾರ್ಯಾಚರಣೆಯು ಮೊಬೈಲ್ ಮಾದರಿಯಲ್ಲಿ ಇರಲಿದ್ದು, ಆಂಡ್ರಾಯ್ಡ್ ತಂತ್ರಾಂಶವನ್ನು ಬಳಸಿಕೊಂಡು ಕಾರ್ಯ ನಿರ್ವಹಿಸಲಿದ್ದು ಆಂಡ್ರ್ಯಾಡ್ ಆಪ್ ಗಳನ್ನೂ ಸಹ ಇದರಲ್ಲಿ ಬಳಸಿಕೊಳ್ಳಬಹುದಾಗಿದೆ.

ಲಭ್ಯ ಮಾಹಿತಿ ಪ್ರಕಾರ ರಿಮೇಕ್ಸ್ 1 ಜಿಬಿ ರಾಮ್ 8 ಜಿಬಿ ಮೆಮೊರಿ ಮಾಡಲ್ ಕೇವಲ 1,275 ರೂಪಾಯಿಗಳಿಗೆ ದೊರೆಯುವ ಸಾಧ್ಯತೆ ಇದ್ದು, 2 ಜಿಬಿ ರಾಮ್, 16 ಜಿಬಿ ಮೆಮೋರಿ ಹೊಂದಿರುವ ರಿಮೇಕ್ಸ್ ಮಿನಿ ಬೆಲೆ ಎರಡು ಸಾವಿರದ ಆಸುಪಾಸಿರಬಹುದು ಎಂದು ಕಂಪನಿ ತಿಳಿಸಿದೆ.

ಅಕ್ಟೋಬರ್ ಕೊನೆಯಲ್ಲಿ ಈ ಕಂಪ್ಯೂಟರ್  ಭಾರತೀಯ ಮಾರುಕಟ್ಟೆ ಪ್ರವೇಶಿಸಲಿದೆ ಎನ್ನಲಾಗುತ್ತಿದ್ದು ಎಷ್ಟುದಿನ ಬಾಳಿಕೆ ಬರುತ್ತದೆ ಎಂಬುದನ್ನು ಉಪಯೋಗಿಸಿಯೇ ತಿಳಿಯಬೇಕು.

Write A Comment