ಅಂತರಾಷ್ಟ್ರೀಯ

ಮಾಯವಾಗುತ್ತಿದೆ ಚೀನಾದ ಮಹಾಗೋಡೆ

Pinterest LinkedIn Tumblr

Great-Wall-of-Chinaಬೀಜಿಂಗ್: ಚೀನಾದ ಮಹಾಗೋಡೆ ನಾಶ ಆಗುತ್ತಿದೆ. ನೈಸರ್ಗಿಕ ಅಡ್ಡಪರಿಣಾಮಗಳು ಹಾಗೂ ಮಾನವ ಹಸ್ತಕ್ಷೇಪದಿಂದಾಗಿ ಮಹಾ ಗೋಡೆಯ ಶೇ.30ರಷ್ಟು ಮಾಯವಾಗಿದೆ ಎಂದು ಚೀನಾದ ಮಾಧ್ಯಮವೊಂದು ವರದಿ ಮಾಡಿದೆ.

ಶತಮಾನಗಳಿಂದ ಈಗಾಗಲೇ ಈ ಮಹಾಗೋಡೆಯ ಉದ್ದ 1,962 ಕಿ.ಮೀ. ನಷ್ಟು ಕಡಿಮೆಯಾಗಿದೆ. ಈಗ ಉಳಿದಿರುವ ಗೋಡೆಯ ಮೇಲೆ ಅಲ್ಲಲ್ಲಿ ಮರಗಳು ಬೆಳೆದಿವೆ, ಇನ್ನು ದುರ್ಬಲಗೊಂಡಿವೆ ಎಂದು ಬೀಜಿಂಗ್ ಟೈಮ್ಸ್ ಹೇಳಿದೆ. ಇನ್ನು ಈ ಗೋಡೆಯ ನಾಶಕ್ಕೆ ಮಾನವ ಹಸ್ತಕ್ಷೇಪವೂ ಪ್ರಮುಖ ಕಾರಣವಾಗುತ್ತಿದೆ. ಹೆಬೆ ಪ್ರಾಂತ್ಯದ ಲುಲಾಂಗ್ ಕೌಂಟಿಯ ಗ್ರಾಮಸ್ಥರು ಮನೆ ನಿರ್ಮಿಸಲು ಈ ಮಹಾಗೋಡೆಯ ಇಟ್ಟಿಗೆಗಳನ್ನೇ ಬಳಸುತ್ತಿದ್ದಾರೆ. ಈ ಗೋಡೆಯ ಇಟ್ಟಿಗೆಗಳನ್ನು ಚೀನಾದ ಕಾಂಟ್ರ್ಯಾಕ್ಟರ್ ಗಳು ಕಡಿಮೆ ಬೆಲೆಗೆ ಸ್ಥಳೀಯರಿಗೆ ಮಾರಾಟ ಮಾಡುತ್ತಾರೆ ಎಂದೂ ಹೇಳಲಾಗಿದೆ.

Write A Comment