ಅಂತರಾಷ್ಟ್ರೀಯ

ಐಸ್ಪರ್ಮ್ ಮೂಲಕ ನೀವೇ ಮನೆಯಲ್ಲೇ ವೀರ್ಯ ಪರೀಕ್ಷೆ ಮಾಡಿಕೊಳ್ಳಿ: ಈ ಸ್ಮಾರ್ಟ್ ಫೋನ್ ಮೂಲಕ 17 ಸೆಕಂಡಲ್ಲಿ ಫಲಿತಾಂಶ ಪಡೆಯಬಹುದು

Pinterest LinkedIn Tumblr

iSpermತೈಪೇ: ವೀರ್ಯ ಗುಣಮಟ್ಟವನ್ನು ಅರಿಯಲು ಪರೀಕ್ಷೆ ಮಾಡಿಸಿಕೊಳ್ಳಬೇಕಾದರೆ ನೂರಾರು ರೂಪಾಯಿ ತೆರಬೇಕು. ಆದರೆ, ತೈವಾನ್ ನ ಏಡ್ ಮಿಕ್ಸ್ (Aidmics) ಕಂಪನಿಯೊಂದು ಬಹಳ ಅಗ್ಗದ ದರದಲ್ಲಿ ವೀರ್ಯ ಪರೀಕ್ಷೆಯ ಸಾಧನವನ್ನು ಹೊರತಂದಿದೆ.

ಈ ಸಾಧನವನ್ನು ಐಸ್ಪರ್ಮ್(ISperm) ಎಂದು ಕರೆಯಲಾಗಿದ್ದು, ಈ ವೀರ್ಯ ಪರೀಕ್ಷಕದಿಂದ ಮನೆಯಲ್ಲಿ ವೀರ್ಯ ಪರೀಕ್ಷೆ ಮಾಡಿಕೊಳ್ಳಬಹುದು. ಆದರೆ, ಫಲಿತಾಂಶ ಪಡೆಯಲು ಐಪ್ಯಾಡ್ ಬೇಕಾಗುತ್ತದೆ. ಈ ಮೂಲಕ ಕೆಲವೇ ಕ್ಷಣಗಳಲ್ಲಿ ಫಲಿತಾಂಶ ಪಡೆಯಬಹುದಾಗಿದೆ.

ಇದನ್ನು ಬಳಸುವ ವಿಧಾನ
ಈ ಸಾಧನದಲ್ಲಿ ಬೆಳಕು ಬೀಳುವಂತೆ ವ್ಯವಸ್ಥೆ ಮಾಡಲಾಗಿದ್ದು ಆ ಪುಟ್ಟ ಕೊಳವೆಯೊಳಗೆ ವೀರ್ಯವನ್ನು ಬೇಕು. ಬಹಳ ಚಿಕ್ಕದಾದ ಸೂಕ್ಷ್ಮದರ್ಶಕವು(Microscope) ಈ ವೀರ್ಯವನ್ನು ಪರಿಶೀಲಿಸುತ್ತದೆ. ಬೆಳಕಿನ ಕಿರಣಗಳು ವೀರ್ಯಗಳ ಚಿತ್ರವನ್ನು ಐಪ್ಯಾಡ್ ಕ್ಯಾಮೆರಾಗೆ ರವಾನಿಸುತ್ತವೆ. ಅಲ್ಲಿ ವೀರ್ಯಗಳ ಪ್ರಮಾಣ ಮತ್ತು ಚಲನಶೀಲತೆಯನ್ನು ಗ್ರಹಿಸುವಂಥ ಸಾಫ್ಟ್ ವೇರನ್ನು ಐಪ್ಯಾಡ್’ನಲ್ಲಿ ಅಳವಡಿಸಲಾಗಿರುತ್ತದೆ.

ಎರಡು ವರ್ಷಗಳ ಹಿಂದೆಯೇ ಅಮೆರಿಕದ ಹಸುಗಳಿಗೆ ಈ ತಂತ್ರಜ್ಞಾನದ ಸಾಧನವನ್ನು ಉಪಯೋಗಿಸಲಾಗುತ್ತಿತ್ತು. ಈಗ ಮನುಷ್ಯರಿಗೂ ಸೇವೆ ವಿಸ್ತರಿಸಿದೆ ಕಂಪನಿ. ಸುಮಾರು 6-10 ಸಾವಿರ ರುಪಾಯಿಗೆ ಈ ಐಸ್ಪರ್ಮ್ ಸಾಧನ ಲಭ್ಯವಾಗುವ ಸಾಧ್ಯತೆ ಇದೆ. ಆದರೆ, ಈ ಪರೀಕ್ಷಕ ಎಷ್ಟು ನಿಖರವಾಗಿ ವೀರ್ಯ ಪರೀಕ್ಷೆ ನಡೆಸುತ್ತದೆ ಎಂಬುದು ಇನ್ನೂ ಖಚಿತವಾಗಿ ಗೊತ್ತಾಗಿಲ್ಲ.

Write A Comment