ಅಂತರಾಷ್ಟ್ರೀಯ

112 ವರ್ಷ ವಯಸ್ಸಿನ ‘ವಿಶ್ವದ ಹಿರಿಯಜ್ಜ’ ಇನ್ನಿಲ್ಲ

Pinterest LinkedIn Tumblr

112-year-old-man

ಟೋಕಿಯೋ, ಜು.7: ವಿಶ್ವದ ಹಿರಿಯಜ್ಜ ಎಂದೇ ಗುರುತಿಸಿಕೊಂಡಿದ್ದ 112 ವರ್ಷ ವಯಸ್ಸಿನ ಸಕರಿ ಮೊಮೊಯ್ ಅವರು ಇಂದಿಲ್ಲಿ ನಿಧನರಾಗಿದ್ದಾರೆ.

ಜಪಾನ್ ಮಾಧ್ಯಮಗಳು ಈ ವಿಷಯವನ್ನು ಸ್ಪಷ್ಟಪಡಿಸಿದ್ದು, ಸಾವಿನ ಕೊನೆಯ ಕ್ಷಣದವರೆಗೂ ಆರೋಗ್ಯಪೂರ್ಣರಾಗಿ ಮತ್ತು ಸಾಕಷ್ಟು ಸಮಯ ನಿದ್ರಿಸುತ್ತ ಕಾಲ ಕಳೆಯುತ್ತಿದ್ದ ಮೊಮೊಯ್ ಅವರು ಸಹಜವಾಗಿಯೇ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದೆ.

ಮೊಮೊಯ್ ಅವರು ಜಪಾನ್‌ನಲ್ಲಿ ಸಂಭವಿಸಿದ ಫುಕೋಶಿಮಾ ಘಟನೆಗೂ ಮುಂಚೆ 1903ರ ಫೆಬ್ರವರಿಯಲ್ಲಿ ಜನಿಸಿದ್ದರು. 2004ರ ಆಗಸ್ಟ್‌ನಲ್ಲಿ ಮೊಮೊಯ್ ಅವರನ್ನು ವಿಶ್ವದ ಹಿರಿಯಜ್ಜ ಎಂದು ಹೆಸರಿಸಲಾಗಿತ್ತು. ನಿವೃತ್ತ ಉಪಾಧ್ಯಾಯರಾದ ಇವರು ತಮ್ಮ ಬದುಕನ್ನು ಸಂತಸದಿಂದ ಕಳೆಯಲು ಅಗತ್ಯವಾದ ಕಾರ್ಯ ಕೈಗೊಳ್ಳುತ್ತ ಬಂದಿದ್ದರು.

ಗಿನ್ನಿಸ್ ವಿಶ್ವ ದಾಖಲೆಗೆ ಸೇರ್ಪಡೆಯಾದ ದಿನ ಸೂಟು-ಬೂಟಿನಲ್ಲಿ ಟೈ ಧರಿಸಿಕೊಂಡ ಮೊಮೊಯ್ ಎಲ್ಲರ ಗಮನ ಸೆಳೆದಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಾನು ಇನ್ನಷ್ಟು ವರ್ಷಗಳ ಕಾಲ ಬದುಕಲಿಚ್ಛಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ಜಪಾನ್‌ನಲ್ಲಿ 1903ರ ಮಾರ್ಚ್‌ನಲ್ಲಿ ಜನಿಸಿದ ಎಸೊತ್ತರೊ ಕೊಯ್ಡೆ ಅವರು ಮೊಮೊಯ್ ಅವರಿಗಿಂತ ಒಂದು ತಿಂಗಳು ಕಿರಿಯಜ್ಜ ಎಂದು ಗುರುತಿಸಿಕೊಂಡಿದ್ದಾರೆ. ಈ ನಡುವೆ ಅಮೆರಿಕದ ಸುಸನ್ನ ಮುಷತ್ ಜೋನ್ಸ್ ಅವರು 116 ವರ್ಷ ವಯಸ್ಸಿನವರಾಗಿದ್ದು, ವಿಶ್ವದ ಅತಿ ಹೆಚ್ಚು ವಯಸ್ಸಿನ ಅಜ್ಜ ಎಂದು ಹೇಳಲಾಗುತ್ತಿದೆ.

Write A Comment