ಅಂತರಾಷ್ಟ್ರೀಯ

ಮಹಿಳಾ ಬಾಂಬರ್ ನಿಂದ ಆತ್ಮಾಹುತಿ ದಾಳಿ: 5 ಸಾವು

Pinterest LinkedIn Tumblr

bomb-blastನ್ಯೂಯಾರ್ಕ್: ಜಿಗಾವಾ ನಗರದ ರಿದೀಮ್ಡ್ ಕ್ರಿಶ್ಚಿಯನ್ ಚರ್ಚ್ ಬಳಿ ಮಹಿಳಾ ಆತ್ಮಹತ್ಯಾ ಬಾಂಬರ್ ತನ್ನನ್ನು ತಾನೇ ಸ್ಫೋಟಿಸಿಕೊಂಡು 5 ಮಂದಿಯನ್ನು ಬಲಿ ತೆಗೆದುಕೊಳ್ಳುವ ಮೂಲಕ ಉಗ್ರತ್ವಕ್ಕೆ ಭೇದವಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾಳೆ.

ಸೋಮವಾರ ಬೆಳಿಗ್ಗೆ 10 ರ ಸುಮಾರಿಗೆ ಜಿಗಾವಾ ನಗರದ ರಿದೀಮ್ಡ್ ಕ್ರಿಶ್ಚಿಯನ್ ಚರ್ಚ್ ಒಳ ಬಂದ ಮಹಿಳೆ ಇದ್ದಕ್ಕಿದ್ದಂತೆ ತೊಟ್ಟಿದ್ದ ಬಾಂಬ್ ನ್ನು ಸ್ಫೋಟಿಸಿದ್ದಾಳೆ. ಇದರ ಪರಿಣಾಮ ಚರ್ಚ್ ನಲ್ಲಿ ಹಲವಾರು ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ, 5 ಮಂದಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಚರ್ಚೆ ಒಳಗೆ ಬಂದ ಮಹಿಳೆಯೊಬ್ಬಳು ಇದ್ದಕ್ಕಿದ್ದಂತೆ ತಾನು ತೊಟ್ಟಿದ್ದ ಬಟ್ಟೆ ಬಿಚ್ಚಿದಳು. ಏನಿದು ಎಂದು ಆಲೋಚಿಸುವುದಕ್ಕೂ ಸಮಯವಿರಲಿಲ್ಲ. ಕ್ಷಣಾರ್ಧದಲ್ಲಿ ಬಾಂಬ್ ಸ್ಫೋಟಗೊಂಡಿತು. ಸ್ಥಳದಲ್ಲಿದ್ದ ಹಲವರು ಗಾಯಗೊಂಡರು ಎಂದು ಪ್ರತ್ಯಕ್ಷ ದರ್ಶಿಯೊಬ್ಬರು ಹೇಳಿದ್ದಾರೆ.

ಘಟನೆ ಕುರಿತಂತೆ ಈ ವರೆಗೂ ಯಾವುದೇ ಸಂಘಟನೆಗಳು ಹೊಣೆ ಹೊತ್ತಿಲ್ಲ. ಆದರೆ, ದಾಳಿ ಮಾಡಿದ ಮಹಿಳೆ ಇಸಿಸ್ ಅಥವಾ ಬೋಕೋ ಹರಮ್ ಉಗ್ರ ಸಂಘಟನೆಗೆ ಸೇರಿದವಳಾಗಿರಬಹುದು ಎಂದು ಶಂಕಿಸಲಾಗಿದೆ.

Write A Comment