ಅಂತರಾಷ್ಟ್ರೀಯ

ಈಜಿಪ್ಟ್ ಸೇನೆ ವಾಯು ದಾಳಿಗೆ 25 ಇಸಿಸ್ ಉಗ್ರರು ಬಲಿ

Pinterest LinkedIn Tumblr

ISISಕೈರೋ: ಈಜಿಪ್ಟ್ ಸೇನೆ ನಡೆಸಿದ ವಾಯು ದಾಳಿಯಲ್ಲಿ 25 ಮಂದಿ ಇಸ್ಲಾಮಿಕ್ ಉಗ್ರರು ಮೃತಪಟ್ಟಿದ್ದಾರೆ ಎಂದು ಸೇನಾ ಮೂಲಗಳು ತಿಳಿಸಿವೆ.

ಉತ್ತರ ಸಿನಾಯ್ ಭಾಗದಲ್ಲಿಯ ಇಸ್ಲಾಮಿಕ್ ಉಗ್ರರ ತಾಣಗಳ ಮೇಲೆ ಈಜಿಪ್ಟ್ ಸೇನೆ ಭಾರಿ ಪ್ರಮಾಣದಲ್ಲಿ ವಾಯು ದಾಳಿ ನಡೆಸಿದೆ. ಸ್ವತಃ ಈಜಿಪ್ಟ್ ಅಧ್ಯಕ್ಷ ಅಬ್ಡೆಲ್ ಫತ್ಹಾ ಅಲ್‌ ಸಿಸಿ ಅವರೇ ಮೊದಲ ಬಾರಿಗೆ ಸೇನಾ ಸಮವಸ್ತ್ರ ಧರಿಸಿ ದಾಳಿ ಪ್ರದೇಶಕ್ಕೆ ಭೇಟಿ ನೀಡಿ ಉಗ್ರರ ವಿರುದ್ಧ ಸೇನಾ ಕಾರ್ಯಾಚರಣೆ ನಡೆಸುತ್ತಿರುವ ಯೋಧರನ್ನು ಉರಿದುಂಬಿಸಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಇಸ್ಲಾಮಿಕ್ ಉಗ್ರರ ನೆಲೆಗಳಿಂದ ಅಪಾರ ಪ್ರಮಾಣದಲ್ಲಿಯ ಸ್ಫೋಟಕಗಳನ್ನು, ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಸೇನಾ ಮೂಲಗಳು ತಿಳಿಸಿವೆ.

ಅಧ್ಯಕ್ಷ ಮೊಹ್ಮದ್ ಮೋರ್ಸಿ ಅವರ ನಂತರದಲ್ಲಿ ಅಬೈಲ್ ಸಿಸಿ ಸರಕಾರವನ್ನು ಬುಡಮೇಲುಗೊಳಿಸಲು ಇಸ್ಲಾಮಿಕ್ ಉಗ್ರರು ಭಾರಿ ಪ್ರಮಾಣದಲ್ಲಿ ದಾಳಿ ಹಿಂಸಾಚಾರಗಳನ್ನು ನಡೆಸುತ್ತ ಬಂದಿದೆ.

Write A Comment