ಅಂತರಾಷ್ಟ್ರೀಯ

ಅಲಂಕಾರದ ವಸ್ತುವಾದ ಕಲ್ಲಂಗಡಿ, ಬೆಲೆ ರು. 6699!

Pinterest LinkedIn Tumblr

water_melonಟೋಕಿಯೋ: ಇಲ್ಲಿ ಮಾರಾಟಕ್ಕಿಟ್ಟಿರುವ ಒಂದು ಕಲ್ಲಂಗಡಿ ಹಣ್ಣಿನ ಬೆಲೆ ಎಷ್ಟು ಗೊತ್ತಾ? ರು.6699! ಈ ಕಲ್ಲಂಗಡಿ ಹಣ್ಣು ಇಷ್ಟೊಂದು ದುಬಾರಿಯಾಗಿದ್ದರೂ ಜಪಾನ್‌ನ ಜನರು ಇದನ್ನು ಮುಗಿಬಿದ್ದು ಖರೀದಿಸುತ್ತಾರೆ. ಖರೀದಿ ಮಾಡುವ ಜನರು ಈ ಹಣ್ಣನ್ನು ತಿನ್ನುವುದಿಲ್ಲ, ಬದಲಾಗಿ ಅಲಂಕಾರದ ವಸ್ತುವನ್ನಾಗಿ ಮನೆಯಲ್ಲಿಟ್ಟುಕೊಳ್ಳುತ್ತಾರಂತೆ!

ಸಾಮಾನ್ಯ ಕಲ್ಲಂಗಡಿ ಹಣ್ಣಿನಂತೆ ಈ ಕಲ್ಲಂಗಡಿ ಹಣ್ಣುಗಳು ಗೋಲಾಕಾರದಲ್ಲಿ ಇಲ್ಲ. ಇಲ್ಲಿ ತ್ರಿಕೋನ, ಆಯತ ಹಾಗೂ ಹೃದಯದಾಕಾರದಲ್ಲಿ ಕಲ್ಲಂಗಡಿ ಹಣ್ಣುಗಳು ಮಾರಲ್ಪಡುತ್ತವೆ. ಹಾಗಂತ ಇವು ವಿಶೇಷ ತಳಿಯ ಕಲ್ಲಂಗಡಿ ಹಣ್ಣುಗಳೇನೂ ಅಲ್ಲ. ಕಲ್ಲಂಗಡಿ ಬೆಳೆಯುವ ಹಂತದಲ್ಲಿಯೇ ಅದನ್ನು ವಿವಿಧ ಶೇಪ್‌ಗಳ ಕಂಟೈನರ್‌ನಲ್ಲಿಟ್ಟು ಬೆಳೆಸಲಾಗುತ್ತದೆ. ಇದರಿಂದಾಗಿ ಕಲ್ಲಂಗಡಿ ಹಣ್ಣು ವಿವಿಧ ಆಕಾರಗಳನ್ನು ಪಡೆದುಕೊಳ್ಳುತ್ತದೆ.

ಹಾರ್ಟ್ ಅಥವಾ ಪಿರಮಿಡ್ ಆಕೃತಿಯ ಕಲ್ಲಂಗಡಿ ಹಣ್ಣುಗಳನ್ನು ಲಿವಿಂಗ್ ರೂಂನ ಕಾಫಿ ಟೇಬಲ್‌ನಲ್ಲಿರಿಸಲು ಜನರು ಇಷ್ಟ ಪಡುತ್ತಾರೆ. ಈ ಹಣ್ಣುಗಳು ಅಷ್ಟೊಂದು ರುಚಿಕರವಾಗಿಲ್ಲದೇ ಇದ್ದರೂ ನೋಡಲು ತುಂಬಾ ಸುಂದರವಾಗಿದ್ದು, ಕಣ್ಣಿಗೆ ತಂಪು ಅನುಭವವನ್ನು ನೀಡುತ್ತವೆ ಎಂದು ಕಲ್ಲಂಗಡಿ ಮಾರುವ ಅಂಗಡಿಯೊಂದರ ಹಿರಿಯ ಮ್ಯಾನೇಜಿಂಗ್ ಡೈರೆಕ್ಟರ್ ಮೋಟೋಟಕಾ ನಿಶಿಮುರಾ ಹೇಳಿದ್ದಾರೆ.

1 Comment

Write A Comment