ಅಂತರಾಷ್ಟ್ರೀಯ

ಮೂವರು ವಿದ್ಯಾರ್ಥಿಗಳೊಂದಿಗೆ ಹಾಸಿಗೆ ಹಂಚಿಕೊಂಡ ಶಿಕ್ಷಕಿ ಜೈಲುಪಾಲು

Pinterest LinkedIn Tumblr

shiತನ್ನ ಮೂವರು ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ರಾಸಲೀಲೆ ನಡೆಸಿದ ಶಿಕ್ಷಕಿಯೊಬ್ಬಳು ಜೈಲು ಪಾಲಾದ ಘಟನೆಯೊಂದು ನಡೆದಿದೆ.

ಅಮೆರಿಕಾದ ಫ್ಲೋರಿಡಾದಲ್ಲಿ ಈ ಘಟನೆ ನಡೆದಿದ್ದು ರಾಬಿನ್ ಸನ್ ವುಡ್ ಶಾಲೆಯಲ್ಲಿ 30 ವರ್ಷದ ಜೆನಿಫರ್ ಪಿಚರ್ ಎಂಬ ಇಂಗ್ಲೀಷ್ ಶಿಕ್ಷಕಿ ತನ್ನ ಮೂವರು 17 ವರ್ಷದ ಅಪ್ರಾಪ್ತ ವಿದ್ಯಾರ್ಥಿಗಳೊಂದಿಗೆ ತನ್ನ ಕಾಮದ ಬಯಕೆಯನ್ನು ತೀರಿಸಿಕೊಂಡಿದ್ದಲ್ಲದೇ  ಒಬ್ಬ ವಿದ್ಯಾರ್ಥಿಯಿಂದ ಗರ್ಭಿಣಿಯೂ ಆಗಿ ಗರ್ಭಪಾತ ಮಾಡಿಸಿಕೊಂಡಿದ್ದಳು.

ಈ ಕುರಿತ್ರು ಪ್ರಕರಣ ದಾಖಲಾಗಿತ್ತಲ್ಲದೇ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ಪ್ರಕರಣದ ವಿಚಾರಣೆ ಸಮಯದಲ್ಲಿ ತಾನು ವಿದ್ಯಾರ್ಥಿಗಳ ಜತೆ ರಾಸ ಲೀಲೆ ನಡೆಸಿರುವುದನ್ನು ಒಪ್ಪಿಕೊಂಡಿರುವ ಶಿಕ್ಷಕಿ ತನ್ನ ಮೂವರು ವಿದ್ಯಾರ್ಥಿಗಳ ಜೊತೆ 7 ತಿಂಗಳಲ್ಲಿ 37 ಭಾರಿ ಲೈಂಗಿಕ ಕ್ರಿಯೆ ನಡೆಸಿದ್ದು ಇದೀಗ ತನ್ನ ತಪ್ಪಿನ ಅರಿವಾಗಿದೆ ಎಂದು ಅಲವತ್ತುಕೊಂಡಿದ್ದಾಳೆ .

ಅಷ್ಟೇ ಅಲ್ಲ, ತನ್ನ ಕಾಮ ಸುಖಕ್ಕೆ ಬಲಿಯಾದ ಮೂವರು ವಿದ್ಯಾರ್ಥಿಗಳು ಹಾಗೂ ಅವರ ಪೋಷಕರ ಬಳಿ ಕಣ್ಣೀರು ಹಾಕಿ ಕ್ಷಮೆಯನ್ನೂ  ಕೇಳಿದ್ದಾಳೆ. ಆದರೆ ಶಿಕ್ಷಕಿಯನ್ನು ನರಭಕ್ಷಕಿ ಎಂದು ಹೀಗಳೆದಿರುವ ನ್ಯಾಯಾಲಯ 22 ವರ್ಷ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದೆ.

Write A Comment