ಅಂತರಾಷ್ಟ್ರೀಯ

ಎಸ್ಎಂಎಸ್ ಜನಕ ಮಟ್ಟಿ ಮ್ಯಾಕ್ಕೊನೆನ್ ನಿಧನ

Pinterest LinkedIn Tumblr

SMSಲಂಡನ್: ನಾವು ನೀವೆಲ್ಲರೂ ದಿನನಿತ್ಯ ಬಳಸುವ ಎಸ್ಎಂಎಸ್ ನ ಜನಕ ಮಟ್ಟಿ ಮ್ಯಾಕ್ಕೊನೆನ್ ನಿಧನರಾಗಿದ್ದಾರೆ.

ಫಿನ್ ಲ್ಯಾಂಡ್ ನ ನಾಗರಿಕರಾಗಿದ್ದ ಮಟ್ಟಿ ಮ್ಯಾಕ್ಕೊನೆನ್ (63) ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದರು ಎಂದು ಫಿನ್ ಲ್ಯಾಂಡ್ ನ ಪತ್ರಿಕೆಯೊಂದು ವರದಿ ಮಾಡಿದೆ. ಎಸ್ಎಂಎಸ್ ಜನಕ ಎಂದೇ ಗುರುತಿಸಿಕೊಂಡಿದ್ದರು ಆ ತಂತ್ರಜ್ಞಾನವನ್ನು ತಾವೊಬ್ಬರೇ ಕಂಡುಹಿಡಿದಿದ್ದಲ್ಲ ಎಂದು ಮ್ಯಾಕ್ಕೊನೇನ್ ಹೇಳಿದ್ದರು. ಮೊಬೈಲ್ ನಲ್ಲಿ ಮೊದಲ ಸಂದೇಶದ 20  ನೇ ವಾರ್ಷಿಕೋತ್ಸದ ಕಾರ್ಯಕ್ರಮದ ಅಂಗವಾಗಿ ಮಾತನಾಡಿದ್ದ ಮ್ಯಾಕ್ಕೊನೆನ್, ಎಸ್ಎಂಎಸ್ ಅಭಿವೃದ್ಧಿಪಡಿಸಲು ಚಿಂತಿಸಿದ ಬಳಿಕ ಜನಪ್ರಿಯ ಮೊಬೈಲ್ ಸಂಸ್ಥೆ ನೋಕಿಯಾ ಅದನ್ನು ಜನಪ್ರಿಯಗೊಳಿಸಿತ್ತು ಎಂದು ಸ್ಮರಿಸಿದ್ದರು.

ನೋಕಿಯಾ 1994 ರಲ್ಲಿ ಬಿಡುಗಡೆ ಮಾಡಿದ 2010 ಮಾದರಿಯ ಮೊದಲ ಮೊಬೈಲ್ ನಲ್ಲಿ  ಸುಲಭವಾಗಿ ಸಂದೇಶ ಕಳಿಸುವ ಮೂಲಕ ಎಸ್ಎಂಎಸ್ ಸೌಲಭ್ಯ ಅಧಿಕೃತವಾಗಿ ಜಾರಿಗೆ ಬಂದಿತ್ತು ಎಂದು ಮ್ಯಾಕ್ಕೊನೆನ್ ಹೇಳಿದ್ದರು. ಫಿನ್ನಿಶ್ ದೂರಸಂವನ ಸಮೂಹದ ವ್ಯವಸ್ಥಾಪಕ ನಿರ್ದೇಶಕ  ಜರ್ಮೋ ಮ್ಯಾಟಿಲೆನೇನ್, ಮ್ಯಾಕ್ಕೊನೆನ್ ಅವರನ್ನು ಮೊಬೈಲ್ ಉದ್ಯಮದ ವೃದ್ಧ ಪಿತಾಮಹಾ ಎಂದು ಬಣ್ಣಿಸಿದ್ದು ಮ್ಯಾಕ್ಕೊನೆನ್ ಸಾವಿಗೆ ಸಂತಾಪ ಸೂಚಿಸಿದ್ದಾರೆ.

ಯುಕೆ ನಲ್ಲಿ ಎಸ್ಎಂಎಸ್ ಕಳಿಸುವವರ ಸಂಖ್ಯೆ ಕುಸಿಯುತ್ತಿದ್ದರೂ, ಪ್ರಪಂಚಾದ್ಯಂತ ಅದು ಜನಪ್ರಿಯವಾಗಿದ್ದು ಪ್ರತಿ ದಿನ ಟ್ರಿಲಿಯನ್ ಗಳಷ್ಟು ಸಂದೇಶ ರವಾನೆಯಾಗುತ್ತಿದೆ ಎಂದು ಜರ್ಮೋ ಮ್ಯಾಟಿಲೆನೇನ್ ಹೇಳಿದ್ದಾರೆ.

Write A Comment