ಅಂತರಾಷ್ಟ್ರೀಯ

ಅಬ್ಬಬ್ಬಾ ಎಂಥಾ ಪ್ರೀತಿ…!ಅಪರೂಪಕ್ಕೆ ಒಂದಾದ ಕಾಗೆ- ಗರುಡ; ಇದು ಕಂಡುಬಂದದ್ದು ವಾಷಿಂಗ್ಟನ್​ನ ಸೀಬ್ಯಾಕ್ ಪಟ್ಟಣದ ಹಿನ್ನೀರ ಪ್ರದೇಶದಲ್ಲಿ

Pinterest LinkedIn Tumblr

3

ವಾಷಿಂಗ್ಟನ್: ಇದೇನು… ಗರುಡನಿಗೂ ಕಾಗೆಗೂ ಇದೆಂತಾ ಪ್ರೀತಿ ಅಂದುಕೊಂಡ್ರಾ? ಅಚ್ಚರಿಯೆನಿಸಿದರೂ ಸತ್ಯ. ಹಾರುವ ಹಕ್ಕಿಯ ದೇಹದ ಮೇಲೆ ಇನ್ನೊಂದು ಹಕ್ಕಿ ಕುಳಿತು ಹೋಗುವುದೆಂದರೆ… ಅಬ್ಬಾ!

ಹೌದು, ಇಂತದ್ದೊಂದು ಸನ್ನಿವೇಶವನ್ನು ಕ್ಷಣ ಕ್ಷಣವೂ ತನ್ನ ಕ್ಯಾಮರಾದಲ್ಲಿ ಸೆರೆಹಿಡಿದಿದ್ದಾರೆ 50 ವರ್ಷ ವಯಸ್ಸಿನ ಫೋ ಚಾನ್. ಅಷ್ಟಕ್ಕೂ ಚಾನ್ ವೃತ್ತಿಪರ ಛಾಯಾಗ್ರಾಹಕರೇನಲ್ಲ. ಹವ್ಯಾಸಿ ಛಾಯಾಗ್ರಾಹಕರೇ ಎಂದು ಪ್ರಸಿದ್ಧ ಸುದ್ದಿ ಸಂಸ್ಥೆಗಳಲ್ಲಿ ಒಂದಾದ ‘ಡೈಲಿ ಮೇಲ್’ ಹೇಳಿದೆ.

ಚಾನ್ ಕ್ಯಾಮರಾಕ್ಕೆ ಈ ಅಪರೂಪದ ಕ್ಷಣಗಳು ಸೆರೆಸಿಕ್ಕಿರುವುದು ವಾಷಿಂಗ್ಟನ್​ನ ಸೀಬ್ಯಾಕ್ ಪಟ್ಟಣದ ಹಿನ್ನೀರ ಪ್ರದೇಶದಲ್ಲಿ. ಸಂದರ್ಭದ ಬಗ್ಗೆ ಚಾನ್ ವಿವರಿಸಿರುವಂತೆ ಇಲ್ಲಿಗೆ ನೂರಾರು ಗರುಡ ಹಾವುಗಳಿಗಾಗಿ ಹೊಂಚು ಹಾಕುತ್ತ ಹಾರಾಟ ನಡೆಸುತ್ತಿರುತ್ತವೆ. ಕಾಗೆಯೊಂದು ಇದರ ಪ್ರಯೋಜನ ಪಡೆದುಕೊಳ್ಳುತ್ತಿತ್ತು. ಇದನ್ನು ಕಂಡು ಮತ್ತೆ ಆ ಕ್ಷಣಕ್ಕಾಗಿ ಕ್ಯಾಮರಾ ಹಿಡಿದು ಕಾದು ಕುಳಿತಿರುತ್ತಿದ್ದೆ ಎಂದು ವಿವರಿಸಿದ್ದಾರೆ. ಚಾನ್ ಕಡೆಗೂ ಇದರಲ್ಲಿ ಯಶಸ್ವಿಯಾಗಿದ್ದಾರೆ.

6

5

2

1

ಚಾನ್ ಹೇಳುವಂತೆ ಇನ್ನೇನು ಬೇಟೆಗೆ ಕೆಲವೇ ಸೆಕೆಂಡ್​ಗಳು ಬಾಕಿ ಇರುವಾಗ ಕಾಗೆಯೊಂದು ದಿಕ್ಕಿಗೆ, ಗರುಡ ಇನ್ನೊಂದು ದಿಕ್ಕಿಗೆ ತಿರುಗಿಕೊಂಡವು. ಮೊದಲು ನಾನು ಗರುಡ ಪಕ್ಷಿ ಕಾಗೆಯ ಮೇಲೆ ದಾಳಿ ನಡೆಸುತ್ತಿದೆ ಅಂದುಕೊಂಡೆ ಆದರೆ ಸತ್ಯ ಅದಾಗಿರಲಿಲ್ಲ. ಅದು ಆಮೆಲೆ ಗೊತ್ತಾಯಿತು ಎಂದಿದ್ದಾರೆ. ಏನೇ ಆದರೂ ಇಷ್ಟೆಲ್ಲಾ ಹೊಂಚು ಹಾಕಿ ಬೇಟೆಯಾಡುವ ಪಕ್ಷಿಯ ಹಿಂದೆ ಬಿದ್ದು ಅಪರೂಪದ ಕ್ಷಣಗಳನ್ನು ಕ್ಯಾಮರಾದಲ್ಲಿ ಸೆರೆಹಿಡಿಯವು ಛಾಯಾಗ್ರಾಹಕನ ತಾಳ್ಮೆಗೂ ಹ್ಯಾಟ್ಸಾಫ್ ಎನ್ನಲೇಬೇಕಲ್ಲವೇ?

Write A Comment