ಅಂತರಾಷ್ಟ್ರೀಯ

ಕೈಗಳೆರಡೂ ಇಲ್ಲದಿದ್ದರೂ ಈಕೆ ಪೈಲೆಟ್ ! ಕಾಲಿನಲ್ಲಿಯೇ ವಿಮಾನ ಹಾರಾಟ; ಗಿನ್ನೆಸ್ ದಾಖಲೆಗೂ ಪಾತ್ರ

Pinterest LinkedIn Tumblr

Jessica-Cox

ಅರಿಜೋನಾ: ಕೈಗಳೇ ಇಲ್ಲದವರು ವಿಮಾನ ಹಾರಾಟ ನಡೆಸುವುದು ಸಾಧ್ಯವೇ? ಅಮೆರಿಕದ ಅರಿಜೋನಾದ ಮಹಿಳೆ ಜೆಸ್ಸಿಕಾ ಕಾಕ್ಸ್ ಯಶೋಗಾಥೆಯನ್ನು ಕೇಳಿದ ಬಳಿಕ ಸಾಧ್ಯವೆಂದು ಒಪ್ಪಲೇಬೇಕು.

SAMSUNG DIGITAL CAMERA

ಹೌದು, ಹುಟ್ಟಿನಿಂದಲೇ ಎರಡೂ ಕೈಗಳಿಲ್ಲದ ಈಕೆ ಸತತ ಪರಿಶ್ರಮ, ಸಾಧನೆಯಿಂದ ಕಾಲಿನಲ್ಲೇ ವಿಮಾನ ಹಾರಾಟ ನಡೆಸುವುದನ್ನು ಕಲಿತು ಪೈಲಟ್ ಆಗಿದ್ದಾರೆ. ಇಷ್ಟೇ ಅಲ್ಲದೆ, ಕಾಲಿನಲ್ಲಿ ವಿಮಾನ ಹಾರಿಸಿ 2008ರಲ್ಲಿ ಗಿನ್ನೆಸ್ ದಾಖಲೆಗೂ ಪಾತ್ರರಾಗಿದ್ದಾರೆ. ಕೈಗಳಿದ್ದವರು ಮಾಡುವ ಎಲ್ಲ ಕೆಲಸಗಳನ್ನೂ ಮಾಡಬಲ್ಲೆ ಎಂದು ಧೈರ್ಯದಿಂದ ಹೇಳಿಕೊಳ್ಳುವ ಜೆಸ್ಸಿಕಾ ಅಂಗವಿಕಲರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನೂ ಮಾಡುತ್ತಿದ್ದಾರೆ.

Write A Comment