ಅಂತರಾಷ್ಟ್ರೀಯ

ಉಗ್ರರ ದಾಳಿಯಿಂದ ಪತ್ನಿಯ ರಕ್ಷಿಸಲು ಎದೆಕೊಟ್ಟು ನಿಂತ..!: “ಮಕ್ಕಳಿಗೆ ಹೇಳು ನಾನು ಅವರನ್ನು ತುಂಬಾ ಪ್ರೀತಿಸುತ್ತೇನೆ”: ಮ್ಯಾಥ್ಯೂ ಜೇಮ್ಸ್

Pinterest LinkedIn Tumblr

Matthew-Jamesಟ್ಯುನೀಷಿಯಾ: ಉಗ್ರರ ದಾಳಿಯಿಂದ ತನ್ನ ಪತ್ನಿಯನ್ನು ರಕ್ಷಿಸಲು ಪತಿಯೇ ಗುಂಡಿನ ದಾಳಿಗೆ ಎದೆಕೊಟ್ಟ ಹೃದಯವಿದ್ರಾವಕ ಘಟನೆ ಟ್ಯುನೀಷಿಯಾದಲ್ಲಿ ನಡೆದಿದೆ.

ನಿನ್ನೆ ಟ್ಯುನೀಷಿಯಾದ ಇಂಪೀರಿಯಲ್ ಮರ್‍ ಹಬಾ ಬೀಚ್ ರೆಸಾರ್ಟ್ ಮೇಲೆ ಉಗ್ರರು ನಡೆಸಿದ ಭೀಕರ ಗುಂಡಿನ ದಾಳಿ ವೇಳೆ ಈ ಘಟನೆ ನಡೆದಿದ್ದು, ರಜೆ ನಿಮಿತ್ತ ಪ್ರವಾಸಕ್ಕಾಗಿ ಆಗಮಿಸಿದ್ದ ದಂಪತಿ ಉಗ್ರರ ದಾಳಿಗೆ ಸಿಲುಕಿದ್ದಾರೆ. ಉಗ್ರನೋರ್ವ ಸಿಡಿಸಿದ ಗುಂಡಿನ ಸುರಿಮಳೆಯಲ್ಲಿ ತನ್ನ ಮಡದಿಯನ್ನು ರಕ್ಷಿಸಲು ಮುಂದಾದ ಪತಿ ತಾನೇ ತಡೆಗೋಡೆಯಾಗಿ ನಿಂತು ತನ್ನ ಪತಿಯನ್ನು ರಕ್ಷಿಸಿದ್ದಾನೆ. ಒಂದೆಡೆ ಉಗ್ರ ಸಿಡಿಸಿದ ಗುಂಡುಗಳು ಒಂದೊಂದಾಗಿ ಆತನ ದೇಹ ಹೊಕ್ಕುತ್ತಿದ್ದರೂ, ಸ್ವಲ್ಪವೂ ಕೂಡ ಅಲುಗಾಡದೆ ಗುಂಡಿನ ದಾಳಿಯಿಂದ ತನ್ನ ಪತ್ನಿಯನ್ನು ರಕ್ಷಿಸಿದ್ದಾನೆ.

ಆದರೆ ಪ್ರಸ್ತುತ ಗುಂಡೇಟಿಗೊಳಗಾಗಿರುವ ಮ್ಯಾಥ್ಯೂಸ್ ಸ್ಥಿತಿ ಮಾತ್ರ ಚಿಂತಾಜನಕವಾಗಿದ್ದು, ಆಸ್ಪತ್ರೆಯಲ್ಲಿ ಮ್ಯಾಥ್ಯೂಸ್ ಇದೀಗ ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾನೆ. ಈ ವಿಚಾರವನ್ನು ಸ್ವತಃ ಆತನ ಪತ್ನಿ ಸಾರಾ ವಿಲ್ಸನ್ ಅವರೇ ಹೇಳಿದ್ದು, ಉಗ್ರಗಾಮಿಗಳಿಂದ ತನ್ನನ್ನು ರಕ್ಷಿಸಲು ತನ್ನ ಪತಿ ಗುಂಡೇಟು ತಿಂದ ಎಂದು ಹೇಳಿದ್ದಾರೆ. ಪ್ರಸ್ತುತ ಉಗ್ರರ ದಾಳಿಗೊಳಗಾದ ಟ್ಯುನೀಷಿಯಾದಲ್ಲಿ ಪೊಲೀಸ್ ಸರ್ಪಗಾವಲು ಹಾಕಲಾಗಿದ್ದು, ದಾಳಿಯಲ್ಲಿ ಗಾಯಗೊಂಡಿರುವ ಗಾಯಾಳುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

“ಜೇಮ್ಸ್ ಮ್ಯಾಥ್ಯೂಸ್ ಮತ್ತು ನಾನು ಇಬ್ಬರೂ ಬ್ರಿಟನ್ ನ ಕಾರ್ಡಿಫ್  ಮೂಲದವರು. ರಜೆ ನಿಮಿತ್ತ ಪ್ರವಾಸಕ್ಕಾಗಿ ಟ್ಯುನೀಷಿಯಾಗೆ ಆಗಮಿಸಿದ್ದೆವು. ಬೆಲ್ಲೇವು ಬೀಚ್ ರೆಸಾರ್ಟ್ ನಲ್ಲಿ ನಾವು ತಂಗಿದ್ದು, ಬೀಚ್ ನಲ್ಲಿ ವಾಂಕಿಂಗ್ ಗಾಗಿ ತೆರಳಿದ್ದೆವು. ಈ ವೇಳೆ ಇದ್ದಕಿದ್ದಂತೆಯೇ ಗುಂಡಿನ ಮೊರೆತ ಆರಂಭವಾಯಿತು. ನೋಡ ನೋಡುತ್ತಿದ್ದಂತೆಯೇ ಉಗ್ರರು ಅಲ್ಲಿ ನೆರೆದಿದ್ದ ಜನರತ್ತ ಗುಂಡಿನ ಸುರಿ ಮಳೆ ಗೈದರು. ಇದರಿಂದ ತಪ್ಪಿಸಿಕೊಳ್ಳಲು ನಾನು ಮತ್ತು ಜೇಮ್ಸ್ ಇಬ್ಬರೂ ಪ್ರಯತ್ನಿಸಿದರಾದರೂ, ಉಗ್ರನೊಬ್ಬ ನಮ್ಮನ್ನು ಗುರಿ ಮಾಡಿ ಗುಂಡುಹಾರಿಸಲು ಶುರು ಮಾಡಿದ.ಈ ವೇಳೆ ನನ್ನನ್ನು ರಕ್ಷಿಸಲು ಮ್ಯಾಥ್ಯೂಸ್ ಮುಂದಾದ. ನನ್ನನ್ನು ತನ್ನ ಬೆನ್ನ ಹಿಂದೆ ನಿಲ್ಲಿಸಿಕೊಂಡ. ಹೀಗಾಗಿ ಉಗ್ರ ಸಿಡಿಸಿದ ಗುಂಡುಗಳು ಮ್ಯಾಥ್ಯೂಸ್ ದೇಹ ಹೊಕ್ಕಿತು.

ಜೇಮ್ಸ್ ನನ್ನನ್ನು ಓಡಿಹೋಗುವಂತೆ ಸೂಚಿಸಿದ. ಒಲ್ಲದ ಮನಸ್ಸಿನಿಂದಲೇ ನಾನು ಸ್ಥಳದಲ್ಲಿ ಬಿದ್ದಿದ್ದ ಶವಗಳ ನಡುವೆ ಅವಿತುಕೊಂಡೆ. ಪಕ್ಕದಲ್ಲೇ ಇದ್ದ ಸ್ಮಿಮ್ಮಿಂಗ್ ಪೂಲ್ ನ ನೀರು ಕೂಡ ರಕ್ತಮಯವಾಗಿತ್ತು. ಆ ಪರಿಸ್ಥಿತಿಯನ್ನು ವಿವರಿಸಲೂ ಕೂಡ ನನ್ನಿಂದಾಗುತ್ತಿಲ್ಲ. ಅಷ್ಟು ಭೀಕರವಾಗಿತ್ತು. ಘಟನೆಯಲ್ಲಿ ಸಾಕಷ್ಟು ಜನ ಪ್ರಾಣಕಳೆದು ಕೊಂಡಿದ್ದಾರೆ. ನನ್ನ ಅದೃಷ್ಟಕ್ಕೆ ಮ್ಯಾಥ್ಯೂಸ್ ಜೀವಂತವಾಗಿದ್ದಾರೆ ಎಂದು ಸಾರಾ ವಿಲ್ಸನ್ ತಮ್ಮ ಅನುಭವವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದಾರೆ.

ಘಟನೆ ವಿವರ
ಜೇಮ್ಸ್ ಮ್ಯಾಥ್ಯೂಸ್ ಪತ್ನಿ ಸಾರಾ ವಿಲ್ಸನ್ ಇಬ್ಬರೂ ಮೂಲತಃ ಬ್ರಿಟನ್ ನ ಕಾರ್ಡಿಫ್ ನವರಾಗಿದ್ದು, ರಜೆ ನಿಮಿತ್ತ ಪ್ರವಾಸಕ್ಕಾಗಿ ಟ್ಯುನೀಷಿಯಾದ ಬೀಚ್ ರೆಸಾರ್ಟ್ ಬೆಲ್ಲೇವು ನಲ್ಲಿ ತಂಗಿದ್ದರು. ದಂಪತಿಗಳು ಬೀಚ್ ನಲ್ಲಿ ವಾಕಿಂಗ್ ಗೆ ಬಂದಾಗ ಶಸ್ತ್ರಸಜ್ಜಿತ ಉಗ್ರರು ಇದ್ದಕ್ಕಿದ್ದಂತೆಯೇ ಗುಂಡಿನ ಮಳೆಗರೆಯಲು ಆರಂಭಿಸಿದರು. ಇದರಿಂದ ತಪ್ಪಿಸಿಕೊಳ್ಳಲು ಜೇಮ್ಸ್ ಮತ್ತು ಸಾರಾ ಇಬ್ಬರೂ ಪ್ರಯತ್ನಿಸಿದರಾದರೂ, ಉಗ್ರನೊಬ್ಬನ ಕಣ್ಣ ಇವರ ಮೇಲೆ ಬಿದ್ದಿತ್ತು. ಇದ್ದಕ್ಕಿದ್ದಂತೆಯೇ ಆತ ಇವರತ್ತ ಗುಂಡುಹಾರಿಸಲು ಆರಂಭಿಸಿದ. ಘಟನೆಯಲ್ಲಿ ಪತ್ನಿ ಸಾರಾ ವಿಲ್ಸನ್ ರನ್ನು ರಕ್ಷಿಸಲು ಮ್ಯಾಥ್ಯೂಸ್ ತನ್ನ ಪ್ರಾಣವನ್ನೇ ಪಣವಾಗಿ ಇಟ್ಟ. ಅಂತಿಮವಾಗಿ ಪತ್ನಿ ಪ್ರಾಣವನ್ನು ರಕ್ಷಿಸುವಲ್ಲಿ ಮ್ಯಾಥ್ಯೂಸ್ ಯಶಸ್ವಿಯಾಗಿದ್ದರೂ, ಆತನ ದೇಹ ಹೊಕ್ಕ ಮೂರು ಗುಂಡುಗಳು ಆತನನ್ನು ಜೀವನ್ಮರಣ ಹೋರಾಟ ಮಾಡುವಂತೆ ಮಾಡಿವೆ.

Write A Comment