ಅಂತರಾಷ್ಟ್ರೀಯ

ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಅನಿವಾಸಿ ಭಾರತೀಯ ಬಾಬ್ಬಿ ಜಿಂದಾಲ್

Pinterest LinkedIn Tumblr

babi

ವಾಷಿಂಗ್ಟನ್: ಲೂಸಿಯಾನಾ ಗವರ್ನರ್ ಬಾಬ್ಬಿ ಜಿಂದಾಲ್ 2016 ರಲ್ಲಿ ನಡೆಯಲಿರುವ ಅಮೆರಿಕದ ರಾಷ್ಟ್ರಪತಿ ಚುನಾವಣೆಗೆ ಸ್ಪರ್ಧಿಸುವುದಾಗಿ ಹೇಳಿದ್ದಾರೆ.

ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದೆಂದರೆ, ಭೂಮಿಯಿಂದ ಪರ್ವತದ ಬೆಟ್ಟದ ತುದಿಯವರೆಗೆ ಹತ್ತಿದಂತೆ ಎಂದು ಜಿಂದಾಲ್ ತಿಳಿಸಿದ್ದಾರೆ.

ನನ್ನ ಹೆಸರು ಬಾಬ್ಬಿ ಜಿಂದಾಲ್ ಮತ್ತು ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿದ್ದೇನೆ ಎಂದು ಹೇಳಿದ್ದಾರೆ.ಅನಿವಾಸಿ ಭಾರತೀಯನೊಬ್ಬ ಅಮೆರಿಕದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

44 ವರ್ಷ ವಯಸ್ಸಿನ ಜಿಂದಾಲ್ ಕೆನ್ನೆರ್‌ನ ನ್ಯೂ ಓರ್ಲಿಯನ್ಸ್‌ಗೆ ಆಗಮಿಸಿ ಅಧಿಕೃತವಾಗಿ ಅಮೆರಿಕ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವುದನ್ನು ಘೋಷಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಒಂದು ಬಾರಿ ರೈಸಿಂಗ್ ಸ್ಟಾರ್‌ನಂತೆ ಕಂಡ ಜಿಂದಾಲ್, ತಮ್ಮದೇ ರಾಜ್ಯದಲ್ಲಿ ಇಕ್ಕಟ್ಟಿನ ಪರಿಸ್ಥಿತಿ ಎದುರಿಸುತ್ತಿದ್ದಾರೆ. ರಿಪಬ್ಲಿಕನ್‌ರಲ್ಲಿ ಕಡಿಮೆ ಜನಪ್ರಿಯತೆಯನ್ನು ಹೊಂದಿದ್ದಾರೆ ಎನ್ನಲಾಗಿದೆ.

ಅಮೆರಿಕ ಅಧ್ಯಕ್ಷ ಸ್ಥಾನದ ರೇಸ್‌ನಲ್ಲಿ ರಿಪಬ್ಲಿಕನ್‌ರಾದ ಫ್ಲೋರಿಡಾದ ಮಾಜಿ ಗವರ್ನರ್ ಜೆಬು್ ಬುಷ್,ವಿಸ್ಕೊನ್‌ಸಿನ್ ಗವರ್ನರ್ ಸ್ಕಾಟ್ ವಾಕರ್ ಕೂಡಾ ಇದ್ದಾರೆ ಎಂದು ರಿಪಬ್ಲಿಕನ್ ಮೂಲಗಳು ತಿಳಿಸಿವೆ.

Write A Comment