ಅಂತರಾಷ್ಟ್ರೀಯ

ವಿಮಾನ ಪತನವಾದರೂ ಪ್ರಾಣಾಪಾಯದಿಂದ ಪಾರಾದ ತಾಯಿ -ಮಗು !

Pinterest LinkedIn Tumblr

pla

ಕೆಲವೊಮ್ಮೆ ಅದೃಷ್ಟ ಕೈ ಹಿಡಿದರೆ ಸಾವಿನ ದವಡೆಯಲ್ಲಿದ್ದರೂ ಸಲೀಸಾಗಿ ಪಾರಾಗಬಹುದು ಎಂಬ ಮಾತು ನೂರಕ್ಕೆ ನೂರು ಸತ್ಯ . ಇದಕ್ಕೆ ನಿದರ್ಶನವೆಂಬಂತೆ ಕಳೆದ 5 ದಿನಗಳ ಹಿಂದೆ ಕೊಲಂಬಿಯಾದ ದಟ್ಟಾರಣ್ಯದಲ್ಲಿ ಪತನವಾಗಿದ್ದ ವಿಮಾನದಲ್ಲಿದ್ದ ತಾಯಿ ಹಾಗೂ ಆಕೆಯ ಹಸುಗೂಸು ಪವಾಡ ಸದೃಶ ರೀತಿಯಲ್ಲಿ ಬದುಕಿ ಬಂದಿದ್ದು ಅಚ್ಚರಿಗೆ ಕಾರಣವಾಗಿದೆ.

ಜೂನ್‌ 20 ರ ಶನಿವಾರ ಮಧ್ಯಾಹ್ನ ನೂಕಿಯಿಂದ ಕೋಬ್‌ಡೊ ಗೆ ತೆರಳುತ್ತಿದ್ದ ವೇಳೆ ಪೈಲಟ್‌ ಸೇರಿದಂತೆ ಮೂವರಿದ್ದ ಸೆಸ್ನಾ 303 ಲಘು ವಿಮಾನ ಪತನವಾಗಿತ್ತು. ವಿಮಾನದಲ್ಲಿದ್ದ ಪೈಲೆಟ್‌ ರಕ್ಷಣಾ ಕಾರ್ಯಾಚರಣೆ ವೇಳೆ ವಿಮಾನದಲ್ಲಿಯೇ ಶವವಾಗಿರುವುದು ಪತ್ತೆಯಾಗಿತ್ತು . ಆದರೆ 14 ಮಂದಿಯ ರಕ್ಷಣಾ ತಂಡ ಹಗಲಿರುಳು ವ್ಯಾಪಕ ಹುಡುಕಾಟ ನಡೆಸಿದರೂ ನಾಪತ್ತೆಯಾದ ಮಹಿಳೆ ಹಾಗೂ ಆಕೆಯ ಮಗುವೀಣೆ ಸುಳಿವು ಸಿಕ್ಕಿರಲಿಲ್ಲ. ಈ ಹಿನ್ನೆಲೆಯಲ್ಲಿ ಅವರು ಬದುಕುಳಿದಿರುವ ಸಾಧ್ಯತೆ ಕಡಿಮೆ ಎಂದು  ಬುಧವಾರ ಹುಡುಕಾಟ ಸ್ಥಗಿತಗೊಳಿಸಲು ನಿರ್ಧರಿಸಲಾಗಿತ್ತು.

ಈ ನಡುವೆ ಪವಾಡವೆಂಬಂತೆ  ರಕ್ಷಣಾ ಕಾಯಾಚರಣೆಯ ಕೊನೆಯ ದಿನ ವಿಮಾನ ಪತನಗೊಂಡ ದಟ್ಟಾರಣ್ಯದಲ್ಲಿಯೇ 18 ವರ್ಷ ಪ್ರಾಯದ ನೆಲ್ಲಿ ಮುರಿಲ್ಲೊ ಎನ್ನುವ ಯುವತಿ ಮತ್ತು ಆಕೆಯ ಮಗು ರಕ್ಷಣಾ ತಂಡದ ಕಣ್ಣಿಗೆ ಬಿದ್ದು ಅಚ್ಚರಿ ಮೂಡಿಸಿದ್ದಾರೆ.

ಈಗಾಗಲೇ ಅವರಿಬ್ಬರನ್ನೂ ಹೆಲಿಕ್ಯಾಪ್ಟರ್‌ ಸಹಾಯದಿಂದ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದ್ದು ಮುರಿಲ್ಲೊ ಗೆ ಸ್ವಲ್ಪ ಸುಟ್ಟ ಗಾಯಗಳಾಗಿದ್ದು ಮಗುವಿಗೆ ಯಾವುದೇತೊಂದರೆಯೂ ಆಗಿಲ್ಲ ಎಂಬ ಮಾಹಿತಿ ಲಭಿಸಿದೆ.

Write A Comment